ಪ್ರಧಾನ ಸುದ್ದಿ

ಅಪಾಯಕ್ಕೆ ನಿರ್ಭಯರಾಗಿರಿ

ತಿರುಚಿರಾಪಳ್ಳಿ/ಇಂದೋರ್: ಇನ್ನು ಮುಂದೆ ಗಂಡಾಂತರ ಎದುರಾದಾಗ ಭಯಪಟ್ಟು ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ. ಅಪಾಯದ ವೇಳೆಯಲ್ಲಿ ನಿಮ್ಮಲ್ಲಿರುವ 'ನಿರ್ಭಯಾ' ನೆರವಿಗೆ ಬರುತ್ತದೆ.
 ಏನಿದು 'ನಿರ್ಭಯಾ' ಎಂದು ಯೋಚಿಸುತ್ತಿದ್ದೀರಾ? ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರ(ಬಿಎಆರ್‌ಸಿ)ವು ಗಂಡಾಂತರ ಸೂಚಕ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಡಿ.16ರ ದೆಹಲಿ ಗ್ಯಾಂಗ್‌ರೇಪ್ ಬಲಿಪಶು ನಿರ್ಭಯಾಳ ಹೆಸರನ್ನು ಇಡಲಾಗಿದೆ. ಮಹಿಳೆಯರಿಗಂತೂ ಈ ಸಾಧನ ಅಪಾಯದ ಸಂದರ್ಭಗಳಲ್ಲಿ ಬಹಳಷ್ಟು ಸಹಾಯ ಮಾಡಲಿದೆ.
ಸಂದೇಶ ಕಳುಹಿಸುತ್ತೆ: ಈ ಸಾಧನವನ್ನು ಮೊಬೈಲ್‌ಗೆ ಲಿಂಕ್ ಮಾಡಿರಲಾಗುತ್ತದೆ. ಅಪಹರಣ, ದಾಳಿ, ಅತ್ಯಾಚಾರ,  ಹೃದಯಾಘಾತ ಹೀಗೆ ಏನೇ ಅಪಾಯ ಎದುರಾದರೂ ಅದರಲ್ಲಿರುವ ಗುಂಡಿ ಒತ್ತಿದರೆ ಸಾಕು. ಆಯ್ಕೆ ಮಾಡಿದ್ದ 5 ಸೆಲ್ ಫೋನ್‌ಗಳಿಗೆ ಹಾಗೂ ಪೊಲೀಸ್ ಠಾಣೆಗೆ ಸಂದೇಶ ಹೋಗುತ್ತದೆ.   ದಾಳಿ ಮಾಡಿದಾತ ಆ ಸಾಧನವನ್ನು ಎಳೆದರೂ ನೀವಿದ್ದ ಪ್ರದೇಶವನ್ನು ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯ ಎಂದು ಬಿಎಆರ್‌ಸಿ ತಿಳಿಸಿದೆ.

ಪರಿಚಿತರಿಂದಲೇ ರೇಪ್
ದೇಶದಲ್ಲಿ ದಾಖಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಶೇ.98ರಷ್ಟು ಅತ್ಯಾಚಾರಗಳನ್ನು ಹತ್ತಿರದ ಸಂಬಂಧಿಗಳು ಅಥವಾ ಪರಿಚಿತರೇ ಮಾಡಿರುತ್ತಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ತಿಳಿಸಿದೆ. ಕಳೆದ ವರ್ಷ 24,923 ರೇಪ್ ಕೇಸ್‌ಗಳು ದಾಖಲಾಗಿದ್ದು, ಅದರಲ್ಲಿ 24,470 ಪ್ರಕರಣಗಳಲ್ಲಿ ಪರಿಚಿತರೇ ಅಪರಾಧಿಗಳು. ಅಂದರೆ 100ರಲ್ಲಿ ಶೇ.98ರಷ್ಟು ಅತ್ಯಾಚಾರಗಳನ್ನು ಪರಿಚಿತರೇ ಮಾಡುತ್ತಾರೆ ಎಂಬುದರಲ್ಲಿ ಸಂಶಯವೇ ಇಲ್ಲ ಎಂದಿದೆ ಎನ್‌ಸಿಆರ್‌ಬಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ