ವಿರೋಧಿಗಳ ಜತೆ ಮೈತ್ರಿ ಬೇಡ: ನರೇಂದ್ರ ಮೋದಿ
ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ...
ನವದೆಹಲಿ: ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ಜತೆ ಮೈತ್ರಿ ಬೇಡ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಬಿಜೆಪಿ ವರಿಷ್ಠ ನಾಯಕ ಎಲ್.ಕೆ. ಆಡ್ವಾಣಿ ಜತೆಗಿನ ಭೇಟಿ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೋವಾ ಕಾರ್ಯಕಾರಿಣಿಯಲ್ಲಿ ಹೊಸ ಹೊಣೆ ವಹಿಸಿದ ನಂತರ ಮೋದಿಯವರು ಇದೇ ಮೊದಲ ಬಾರಿಗೆ ನವದೆಹಲಿಗೆ ಆಗಮಿಸಿದ್ದರು.
ಆಡ್ವಾಣಿ ಜತೆಗಿನ ಭೇಟಿ ವೇಳೆ ಬಿಜೆಪಿ-ಜೆಡಿಯು ಮೈತ್ರಿ ಭಂಗ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆಯಾದವು. ಎಲ್ಲದಕ್ಕಿಂತ ಹೆಚ್ಚಾಗಿ ಮೋದಿಗೆ ಸ್ಥಾನಮಾನ ನೀಡಿದ್ದರಿಂದಾಗಿ ತಮಗೆ ಬೇಸರವಾಗಿಲ್ಲ ಎಂಬ ವಿಚಾರವನ್ನು ಆಡ್ವಾಣಿ ಗುಜರಾತ್ ಮುಖ್ಯಮಂತ್ರಿಗೆ ತಿಳಿಸಿದರು.
ಆಡ್ವಾಣಿ ಭೇಟಿ ಬಳಿಕ ನರೇಂದ್ರ ಮೋದಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸಕ್ಕೆ ತೆರಳಿ ಒಂದು ಗಂಟೆ ಕಾಲ ಅವರ ಜತೆ ಕಳೆದರು. ಬಳಿಕ ಅವರು ಯೋಜನಾ ಆಯೋಗದ ಉಪಾಧ್ಯಕ್ಷ ಎಂ.ಎಸ್.ಅಹ್ಲುವಾಲಿಯಾ ಜತೆ ಮಾತುಕತೆ ನಡೆಸಿದರು. ಇದಾದ ಬಳಿಕ ಮೋದಿ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದರು.