ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಾಲ ಮರುಪಾವತಿಸಿದರೆ ಮಾತ್ರ ಜಾಮೀನು: ಹೈಕೋರ್ಟ್ ಸ್ಪಷ್ಟನೆ

Mainashree
Updated On : 18 Jun 2013, 9:56 am

ಬೆಂಗಳೂರು: ಸಾಲ ಮರುಪಾವತಿ ಮಾಡದೆ ಜೈಲು ಸೇರಿರುವ ಉದ್ಯಮಿಗೆ ಪಡೆದಿರುವ ಸಾಲ ಮರುಪಾವತಿ ಮಾಡಿದ ನಂತರವಷ್ಟೇ ಜಾಮೀನು ನೀಡಲು ಸಾಧ್ಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.  ವೆಂಕಟಾಚಲಪತಿ ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆನಂದ ಭೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ರಿಯಲ್ ಎಸ್ಟೇಟ್ ಉದ್ಯಮಕ್ಕಾಗಿ ಮುಂಬಯಿ ಮೂಲದ ವ್ಯಕ್ತಿಯೋರ್ವನಿಂದ 3.5 ಕೋಟಿ ಸಾಲ ಪಡೆದಿದ್ದ ವೆಂಕಟಾಚಲಪತಿ ಅದನ್ನು ಹಿಂದಿರುಗಿಸಿರಲಿಲ್ಲ. ಅಲ್ಲದೆ, ಅದನ್ನು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೂಡ ಬಳಸಿಕೊಂಡಿರಲಿಲ್ಲ. ತಮಗೆ ಹಣ ಹಿಂದಿರುಗಿಸಿಲ್ಲ ಎಂದು ಸಾಲ ನೀಡಿದ ವ್ಯಕ್ತಿ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ವೆಂಕಟಾಚಲಪತಿಯನ್ನು ಬಂಧಿಸಿದ್ದರು.  
ಜಾಮೀನು ಕೋರಿ ವೆಂಕಟಾಚಲಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, ನೀವು ಹಣ ಪಡೆದಿದ್ದು ಸತ್ಯವೇ ಎಂದು ಪ್ರಶ್ನಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ವೆಂಕಟಾಚಲಪತಿ, ಅದನ್ನು ಹಿಂದಿರುಗಿಸುವ ಭರವಸೆ ನೀಡಿದರು.
ಇದನ್ನೊಪ್ಪದ ಪೀಠ, ಮೊದಲು ಹಣ ಪಾವತಿಸಿ ನಂತರ ಜಾಮೀನಿನ ಪ್ರಶ್ನೆ ಎಂದರು. ಅದಕ್ಕೆ ಅರ್ಜಿದಾರರು ಎಂಟು ತಿಂಗಳ ಕಾಲಾವಕಾಶ ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಒಂದು ವಾರದಲ್ಲಿ ಸಾಲ ಮರುಪಾವತಿ ಕುರಿತು ಬ್ಯಾಂಕ್ ದಾಖಲೆಗಳನ್ನು ಒದಗಿಸಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement