ಪ್ರಧಾನ ಸುದ್ದಿ

ಸಹಕಾರ ಇಲಾಖೆ ಲೆಕ್ಕಾಚಾರ ಉಲ್ಟಾ

ಕ.ಪ್ರ. ವಾರ್ತೆ , ಬೆಂಗಳೂರು , ಜೂ.26-
ರಾಜ್ಯ ಸರ್ಕಾರದ ತಪ್ಪು ನಿರ್ಧಾರ ಸಹಕಾರಿ ಇಲಾಖೆ ಲೆಕ್ಕ ಪರಿಶೋಧಕರ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ.
ಹೊಸ ಕಾಯ್ದೆ, ನೂತನ ನಿಯಮಗಳನ್ನು ಅಳವಡಿಸಿಕೊಳ್ಳುವ ಭರದಲ್ಲಿ ಇಲಾಖೆ ತನ್ನ ಲೆಕ್ಕಪರಿಶೋಧಕರನ್ನೇ ಸಹಕಾರಿ ಸಂಸ್ಥೆಗಳ ಲೆಕ್ಕ ಪರಿಶೋಧನೆಯಿಂದ ದೂರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕ ಲೆಕ್ಕ ಪರಿಶೋಧನಾ ಅಧಿಕಾರಿಗಳನ್ನು ಕಾಡುತ್ತಿದೆ. ಸಹಕಾರ ಸಂಸ್ಥೆಗಳಿಗೆ ಸ್ವಾಯತತ್ತೆ ನೀಡಲು ಅನುಷ್ಠಾನಗೊಳಿಸಿರುವ ಹೊಸ ನಿಯಮಗಳ ಜಾರಿಗೊಳಿಸುವ ಭರದಲ್ಲಿ ಇಲಾಖೆ ಲೆಕ್ಕಪರಿಶೋಧಕ ಕೆಲಸಕ್ಕೆ ಕುತ್ತು ತಂದಿದೆ.

ನ್ಯಾಯಾಲಯಕ್ಕೆ ಮೊರೆ: ಸಹಕಾರ ಸಂಸ್ಥೆಗಳ ಲೆಕ್ಕ ಪರಿಶೋಧನೆಗೆ ಖಾಸಗಿ ಚಾರ್ಟ್‌ರ್ಡ್ ಅಕೌಂಟ್‌ಗಳನ್ನು ಸೂಚಿಸಿದೆಯೇ ಹೊರತು, ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಈ ಅಧಿಕಾರಿಗಳನ್ನು ಪಟ್ಟಿಯಿಂದ ಹೊರಗಿಟ್ಟಿದೆ. ಇದರಿಂದ ದಿಕ್ಕೆಟ್ಟಿರುವ 50ಕ್ಕೂ ಹೆಚ್ಚು ಲೆಕ್ಕ ಪರಿಶೋಧಕರು ಸೇವಾ ಅಭದ್ರತೆ ಆತಂಕಕ್ಕೆ ಸಿಲುಕಿದ್ದಾರೆ.  ಇಲಾಖೆ ಹೊಸ ನಿಯಮದಿಂದ ಅನ್ಯಾಯವಾಗಿದೆ ಎಂದು ಕೆಲವರು ನ್ಯಾಯಾಲಯ ಮೊರೆ ಹೋಗುತ್ತಿದ್ದು, ಉಳಿದವರು ಭೀತಿ, ಗೊಂದಲದಿಂದ ಆತಂಕಕ್ಕೊಳಗಾಗಿದ್ದಾರೆ.

ವಾಪಸ್ ಕರೆಸಿಕೊಳ್ಳದೆ ಅತಂತ್ರ: ಇದರಿಂದ ಬಹುತೇಕ ಸಹಕಾರ ಸಂಸ್ಥೆಗಳ ಲೆಕ್ಕಪರಿಶೋಧನೆ ವಿಳಂಬವಾಗುತ್ತಿದ್ದು, ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈ ಮಧ್ಯೆ,ಇಲಾಖೆ ಹೊಸ ತಿದ್ದುಪಡಿ ಕಾಯ್ದೆ ಪ್ರಕಾರ ಸೊಸೈಟಿಗಳಲ್ಲಿದ್ದ 30ಕ್ಕೂ ಅಧಿಕ ಲೆಕ್ಕ ಪರಿಶೋಧಕರನ್ನು ಸೇವೆಯಿಂದ ಬಿಡುಗಡೆ ಮಾಡಿದೆ. ಆದರೆ, ಇವರನ್ನು ಇಲಾಖೆಗೆ ವಾಪಸ್ ಕರೆಸಿಕೊಳ್ಳದೆ ಅತಂತ್ರಗೊಳಿಸಿದೆ.

ಅವಸರದಿಂದಾದ ಎಡವಟ್ಟು
ರಾಜ್ಯದಲ್ಲಿ 36,000 ಸಹಕಾರ ಸಂಸ್ಥೆಗಳಿದ್ದು, ಇವುಗಳ ವಾರ್ಷಿಕ ಲೆಕ್ಕಪರಿಶೋಧನೆಯನ್ನು ಇಲಾಖೆಯ 750 ಲೆಕ್ಕ ಪರಿಶೋಧಕರೇ ನಡೆಸುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ಇತ್ತೀಚಿಗೆ ಸಂವಿಧಾನದ 97ನೇ ವಿಧಿಗೆ ತಿದ್ದುಪಡಿ ತಂದು ಸಹಕಾರ ಸಂಸ್ಥೆಗಳನ್ನು ಪ್ರಬಲ ಹಾಗೂ ಸ್ವಾಯತ್ತಗೊಳಿಸುವ ಪ್ರಯತ್ನ ನಡೆಸಿತು.
ಈ ವಿಚಾರದಲ್ಲಿ ತೀರಾ ಅವಸರ ಮಾಡಿದ ಕೇಂದ್ರ ಸರ್ಕಾರ ರಾಜ್ಯಗಳು ತಿದ್ದುಪಡಿ ಕಾಯ್ದೆಯಂತೆ  ತಮ್ಮ ಕಾಯ್ದೆಗಳನ್ನೂ ಬದಲಿಸಿಕೊಳ್ಳಬೇಕೆಂದೂ ಸೂಚಿಸಿತ್ತು. ಆದರೆ, ಅದಕ್ಕೆ ಹೆಚ್ಚು ಸಮಯವಕಾಶ ನೀಡಲಿಲ್ಲ. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಕೆಸಿಎಸ್ (ರಾಜ್ಯ ಸಹಕಾರಿ ಸಂಘಗಳ)ಕಾಯ್ದೆ 1959ಕ್ಕೆ ತಿದ್ದುಪಡಿ ತಂದು ಅನೇಕ ಹೊಸ ನಿಯಮಗಳನ್ನೂ ಜಾರಿಗೊಳಿಸಿತ್ತು. ಆದರೆ, ಈ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಕೂಲಂಕಷ ಚರ್ಚಿಸದೆ ತರಾತುರಿಯಲ್ಲಿ ತಿದ್ದುಪಡಿ ವಿಧೇಯಕನ್ನು ಅಂಗೀಕರಿಸಿದ್ದರಿಂದ ಹೊಸ ನಿಯಮ ಅನುಷ್ಟಾನ ವೇಳೆ ಸಮಸ್ಯೆ ಕಾಣಿಸಿಳ್ಳುತ್ತಿವೆ.

 ಅಕ್ರಮಕ್ಕೆ ಅವಕಾಶ ಆಗುವುದೇ?
ಹೊಸ ತಿದ್ದುಪಡಿ ನಿಯಮದಲ್ಲಿ ಸಹಕಾರಿ ಸಂಘಗಳ ಲೆಕ್ಕ ಪರಿಶೋಧಕರ ಜತೆಗೆ ಖಾಸಗಿ ಚಾರ್ಟ್‌ರ್ಡ್ ಅಕೌಂಟ್ ಬಳಕೆ ಬಗ್ಗೆಯೂ ಒತ್ತಿ ಹೇಳಲಾಗಿದೆ. ಇದರಿಂದಾಗಿ ಸಹಕಾರಿ ಸಂಸ್ಥೆಗಳು ಸರ್ಕಾರಿ ಲೆಕ್ಕಪರಿಶೋಧಕರನ್ನು ಬಳಸಲು ಹಿಂದೆ ಮುಂದೆ ನೋಡುತ್ತಿವೆ.

ತಾರತಮ್ಯ: ಆರ್ಥಿಕ ಪ್ರಬಲವಾಗಿರುವ ಸಂಘಗಳು 50ರಿಂದ 2ಲಕ್ಷದ ವರೆಗೂ ಶುಲ್ಕ ಪಾವತಿಸಿ ಖಾಸಗಿ ಚಾರ್ಟ್‌ರ್ಡ್ ಅಕೌಂಟ್‌ಗಳಿಂದ ಲೆಕ್ಕಪರಿಶೋಧನೆ ಮಾಡಿಸುತ್ತಿವೆ. ಆದರೆ, ಬಡ ಸಹಕಾರಿ ಸಂಸ್ಥೆಗಳು ಲೆಕ್ಕಪರಿಶೋಧನೆ ಮಾಡಿಸದೆ ಪರದಾಡುತ್ತಿವೆ. ಏಕೆಂದರೆ, ಸರ್ಕಾರಿ ಲೆಕ್ಕಪರಿಶೋಧಕರು ಒಂದು ಸಂಘದ ಲೆಕ್ಕಪರಿಶೋಧನೆಗೆ ಶೇ.0.20ರಷ್ಟು ಮಾತ್ರ ಶುಲ್ಕ ಪಡೆಯುತ್ತಾರೆ. ಆದರೆ, ಖಾಸಗಿಯವರು ಲಕ್ಷ ರುಪಾಯಿಗಳವರೆಗೂ ಕೇಳುತ್ತಿದ್ದಾರೆ. ಅಲ್ಲದೆ ಸರ್ಕಾರಿ ಮತ್ತು ಖಾಸಗಿ ಲೆಕ್ಕಪರಿಶೋಧಕರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಸರ್ಕಾರಿಯವರು ಸೊಸೈಟಿ ಅಕೌಂಟ್ ಪ್ರಕಾರ ಲೆಕ್ಕ ಪರಿಶೋಧಿಸಿದರೆ, ಖಾಸಗಿಯವರು ಕಂಪನಿ ಅಕೌಂಟ್ ಪ್ರಕಾರ ನಡೆಸುತ್ತಾರೆ. ಜತೆಗೆ ಖಾಸಗಿಯವರಿಗೆ ಸಹಕಾರ ಸಂಸ್ಥೆಗಳ ಲೆಕ್ಕಪತ್ರ ಪರಿಚಯವಿರುವುದಿಲ್ಲ. ಅನುಭವವೂ ಕಡಿಮೆ.

ಯಾರಿಗೂ ಅನ್ಯಾಯ ಇಲ್ಲ
ಇದು ಸಂಪೂರ್ಣ ಅಪಪ್ರಚಾರ. ಸರ್ಕಾರಿ ಲೆಕ್ಕಪರಿಶೋಧಕರನ್ನು ಬಳಸಿಕೊಳ್ಳಬಾರದು ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಇಲಾಖೆ ಬಳಿ ಕಡಿಮೆ ಅವಧಿಯಲ್ಲಿ ಹೆಚ್ಚು ಸಂಸ್ಥೆಗಳ ಲೆಕ್ಕಪರಿಶೋಧನೆ ಆಗಬೇಕಿರುವುದರಿಂದ ಖಾಸಗಿ ಸಿಎಗಳಿಂದ ಲೆಕ್ಕಪರಿಶೋಧನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ.
- ಕೃಷ್ಣರಾವ್, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!