ಪ್ರಧಾನ ಸುದ್ದಿ

ಅವಶೇಷದಡಿ ಅನ್ವೇಷಣೆ

ನೆರೆಪೀಡಿತ ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಇದರ ಹೊರತಾಗಿಯೂ ಭೂಸೇನೆ ಮತ್ತು...

ಡೆಹ್ರಾಡೂನ್/ನವದೆಹಲಿ: ನೆರೆಪೀಡಿತ ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ ಬಹುತೇಕ  ಮುಕ್ತಾಯದ ಹಂತಕ್ಕೆ ಬಂದಿದೆ. ಇದರ ಹೊರತಾಗಿಯೂ ಭೂಸೇನೆ ಮತ್ತು ವಾಯುಸೇನಾ ಸಿಬ್ಬಂದಿ ಉತ್ತರಾಖಂಡದಲ್ಲಿಯೇ ಉಳಿಯಲಿದ್ದಾರೆ. ಜತೆಗೆ ಐಎಎಫ್‌ನ ಹೆಲಿಕಾಪ್ಟರ್‌ಗಳೂ 15 ದಿನ ಅಲ್ಲಿಯೇ ಕಾರ್ಯಾಚರಣೆ ಮುಂದುವರಿಸಲಿವೆ.
 ಇದೀಗ ರಕ್ಷಣಾ ಕಾರ್ಯಕರ್ತರ ಗಮನ ಅವಶೇಷಗಳನ್ನು ತೆರವುಗೊಳಿಸುವ ಕಡೆ ಹರಿದಿದೆ. ಪ್ರವಾಹದಿಂದಾಗಿ 3 ಸಾವಿರ ಮಂದಿ ನಾಪತ್ತೆಯಾಗಿದ್ದು, ಬಹುತೇಕರು ಅವಶೇಷಗಳಡಿ ಸಮಾಧಿಯಾಗಿರುವ ಆತಂಕ ವ್ಯಕ್ತವಾಗಿದೆ.  ಅವರಿಗಾಗಿ ರಕ್ಷಣಾ ಪಡೆಗಳು ಶೋಧ ಕಾರ್ಯ ಮುಂದುವರಿಸಲಿವೆ. ನೆರೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಜನ ನಾಪತ್ತೆಯಾಗಿದ್ದಾರೆ. ಹಲವರ ಮೃತದೇಹಗಳು ಅವಶೇಷಗಳಡಿ ಸಿಲುಕಿ ಹಾಕಿಕೊಂಡಿರುವ ಆತಂಕ ಇದೆ. ಹಾಗಾಗಿ ನಾಪತ್ತೆಯಾದವರನ್ನು ಪತ್ತೆಹಚ್ಚುವ ಕೆಲಸಕ್ಕೆ ಇನ್ನು ಮುಂದೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ಭೂಸೇನಾ ಮುಖ್ಯಸ್ಥ ಜ.ಬಿಕ್ರಮ್ ಸಿಂಗ್ ಹೇಳಿದ್ದಾರೆ.
1,273 ಮಂದಿ ರಕ್ಷಣೆ: 
ಮಳೆ ಕೊಂಚ ಬಿಡುವು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ 17 ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿದ್ದು, ಒಟ್ಟು 1,237 ಮಂದಿಯನ್ನು ಮಂದಿಯನ್ನು ಸ್ಥಳಾಂತರಿಸುವಲ್ಲಿ ನೆರವಾಗಿವೆ.  1 ಸಾವಿರಕ್ಕೂ ಅಧಿಕ ಮಂದಿ ಸಿಕ್ಕಿಹಾಕಿಕೊಂಡಿದ್ದು, ಶನಿವಾರದಿಂದ ಅವರ ಸ್ಥಳಾಂತರ ಕಾರ್ಯ ಪೂರ್ಣಗೊಳ್ಳಲಿದೆ  ಜೋಶಿಮಠ್- ಬದರಿನಾಥ, ರುಪ್ರಪ್ರಯಾಗ- ಗೌರಿಕುಂಡ್ ಮತ್ತು ಉತ್ತರಕಾಶಿ- ಗಂಗೋತ್ರಿ ಹೊರತುಪಡಿಸಿ ಬಹುತೇಕ ಎಲ್ಲಾ ರಸ್ತೆ ಸಂಪರ್ಕ ಪುನರಾರಂಭವಾಗಿದೆ.
 ಗೌರವ ವಂದನೆ: ರಕ್ಷಣಾ ಕಾರ್ಯಾಚರಣೆ ವೇಳೆ ಮೃತಪಟ್ಟ 20 ಯೋಧರಿಗೆ ಶುಕ್ರವಾರ ಡೆಹ್ರಾಡೂನ್‌ನಲ್ಲಿ  ಗೌರವ ವಂದನೆ ಸಲ್ಲಿಸಲಾಯಿತು. ಇದರಲ್ಲಿ 5 ಮಂದಿ ಭಾರತೀಯ ವಾಯುಸೇನೆ, 9 ಮಂದಿ ಎನ್‌ಡಿಆರ್‌ಎಫ್ ಮತ್ತು ಆರು ಮಂದಿ ಐಟಿಬಿಪಿ ಸಿಬ್ಬಂದಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ, ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ ಮತ್ತು ಸೇನಾ ಮುಖ್ಯಸ್ಥ ಜ. ಬಿಕ್ರಂ ಸಿಂಗ್ ಹಾಜರಿದ್ದರು.
ರು. 195 ಕೋಟಿ ಪ್ಯಾಕೇಜ್
ನೆರೆಯಿಂದಾಗಿ ಹಾನಿಗೀಡಾಗಿರುವ ಚಾರ್‌ಧಾಮ್ ಮಾರ್ಗಗಳ ಪುನರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 195 ಕೋಟಿ ಪ್ಯಾಕೇಜ್ ನೀಡಲು ನಿರ್ಧರಿಸಿದೆ. ಈ ಪ್ಯಾಕೇಜ್ ಅನ್ನು ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳು ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಬಳಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಚಿರಂಜೀವಿ ಮಾಹಿತಿ ನೀಡಿದ್ದಾರೆ.
ತುರ್ತು ಭೂಸ್ಪರ್ಶ
ರಕ್ಷಣಾ ಕಾರ್ಯದಲ್ಲಿ ನಿರತ ಪವನ್‌ಹನ್ಸ್ ಹೆಲಿಕಾಪ್ಟರ್‌ವೊಂದು ಶುಕ್ರವಾರ ಹರ್ಶಿಲ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಹರ್ಶಿಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಂತ್ರಸ್ತರನ್ನು ಡೆಹ್ರಾಡೂನ್‌ಗೆ ರವಾನಿಸುವ ಕಾರ್ಯದಲ್ಲಿ ಈ ಹೆಲಿಕಾಪ್ಟರ್ ನಿರತವಾಗಿತ್ತು. ಈ ವೇಳೆ ಅದು ಹರ್ಶಿಲ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಆಫರ್ ತಿರಸ್ಕಾರ
ಕೇದಾರನಾಥ ದೇವಸ್ಥಾನವನ್ನು ಪುನರ್ ನಿರ್ಮಿಸಲು ಸಿದ್ಧ ಎನ್ನುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೆರವಿನ ಆಹ್ವಾನವನ್ನು ಉತ್ತರಾಖಂಡ ಸಿಎಂ ವಿಜಯ್ ಬಹುಗುಣ ತಿರಸ್ಕರಿಸಿದ್ದಾರೆ. ದೇವಸ್ಥಾನ ಪುನರ್‌ನಿರ್ಮಾಣ ಹಾಗೂ ಮೂಲಸೌಲಭ್ಯ ಜವಾಬ್ದಾರಿ ರಾಜ್ಯ ಸರ್ಕಾರವೇ ನಿಭಾಯಿಸಲಿದೆ ಎಂದು ಬಹುಗುಣ ತಿಳಿಸಿದ್ದಾರೆ. ಇದಕ್ಕಾಗಿ ಯಾರು ಬೇಕಾದರೂ ನೆರವು ನೀಡಬಹುದು ಎಂದರು.

30ಕ್ಕೆ ಅಂತ್ಯಸಂಸ್ಕಾರ
ಮುಂಬೈ:
ರಕ್ಷಣಾ ಕಾರ್ಯಾಚರಣೆ ವೇಳೆ ಎಂಐ-17 ಕಾಪ್ಟರ್ ದುರಂತದಲ್ಲಿ ಮೃತಪಟ್ಟ ಮಂಗಳೂರು ಮೂಲದ ವಾಯುಸೇನಾಧಿಕಾರಿ ಡೆರೆಲ್ ಕಾಸ್ಟಲಿನೋ ಅಂತ್ಯ ಸಂಸ್ಕಾರ ಭಾನುವಾರ ನಡೆಯಲಿದೆ. ಡೆರೆಲ್ ಸಾವಿನಿಂದ ತೀವ್ರ ಆಘಾತಗೊಂಡಿರುವ ಕುಟುಂಬ ಶುಕ್ರವಾರ ಮುಂಬೈಗೆ ಆಗಮಿಸಿದೆ. ಪುತ್ರನ ಸಾವಿನಿಂದಾಗಿ ಕಾಸ್ಟಲಿನೋ ತಾಯಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!