ಆರ್ಟಿಪಿಎಸ್ 8ನೇ ಘಟಕ ಶುರು
ಇಎಸ್ಪಿ ವಿಭಾಗದ ಕುಸಿತದಿಂದ ದುರಸ್ತಿಗೀಡಾಗಿದ್ದ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8ನೇ ಘಟಕವನ್ನು ಪುನಃ ವಿದ್ಯುತ್...
ರಾಯಚೂರು: ಇಎಸ್ಪಿ ವಿಭಾಗದ ಕುಸಿತದಿಂದ ದುರಸ್ತಿಗೀಡಾಗಿದ್ದ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8ನೇ ಘಟಕವನ್ನು ಪುನಃ ವಿದ್ಯುತ್ ಉತ್ಪಾದನೆಗೆ ಗುರುವಾರ ಬೆಳಗ್ಗೆಯಿಂದ ತೊಡಗಿಸಲಾಗಿದೆ. ಆದರೆ ಘಟಕದಿಂದ ಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ನಿರೀಕ್ಷಿಸುವಂತಿಲ್ಲ.
ಫೆ.16ರಂದು ರಾತ್ರಿ ಹಾರುಬೂದಿ ಸಾಗಣೆಯ ಇಎಸ್ಪಿ ವಿಭಾಗದ ಕುಸಿತದಿಂದ ಸಂಭವಿಸಿದ ಅವಘಡದಿಂದಾಗಿ ಈ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಅವಘಡದಿಂದಾಗಿ ಹಾರುಬೂದಿ ನಿರ್ವಹಣೆಯ ಒಟ್ಟು ನಾಲ್ಕು ಮಾರ್ಗಗಳ ಪೈಕಿ ಎರಡು ಮಾರ್ಗಗಳು ಸಂಪೂರ್ಣ ಹಾನಿಗೀಡಾಗಿದ್ದವು. ಈಗ ದುರಸ್ತಿಗೊಳಿಸಲಾಗಿದ್ದು 250 ಮೆವ್ಯಾ ಬದಲು ಈಗ 100ರಿಂದ 150 ಮೆವ್ಯಾ ವಿದ್ಯುತ್ ಮಾತ್ರ ಉತ್ಪಾದಿಸಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ವಿದ್ಯುತ್ ಕೇಂದ್ರದಿಂದ ಗುರುವಾರ ಬೆಳಗ್ಗೆವರೆಗೆ 23 ಮಿಲಿಯನ್ ಯುನಿಟ್ ವಿದ್ಯುತ್ ರಾಜ್ಯ ಜಾಲಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.