ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಗುಳುಂ ವೀರರಿಗೆ ಲೋಕಾ ಬಲೆ

ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಾರ್ಯಾಚರಣೆ ಮುಂದುವರಿದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ 10 ಭ್ರಷ್ಟ ಅಧಿಕಾರಿಗಳ...

Parashurama
Updated On : 22 Mar 2013, 10:52 am

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.22
ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಾರ್ಯಾಚರಣೆ ಮುಂದುವರಿದಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ 10 ಭ್ರಷ್ಟ ಅಧಿಕಾರಿಗಳ ನಿವಾಸಗಳು ಸೇರಿ ಒಟ್ಟು 26 ಸ್ಥಳಗಳ ಮೇಲೆ ಶುಕ್ರವಾರ ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ದಾಳಿಗೊಳಗಾದ ಒಬ್ಬ ಅಧಿಕಾರಿ ಬಳಿ 3100 ಯುರೋ ಕರೆನ್ಸಿ ಪತ್ತೆಯಾಗಿದೆ. ಮತ್ತೊಬ್ಬರು ಎರಡೂವರೆ ಕೆ.ಜಿ. ಚಿನ್ನಾಭರಣ ಇರಿಸಿಕೊಂಡಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲೋಕಾಯುಕ್ತ ಎಡಿಜಿಪಿ ಎಚ್.ಎಸ್.ಸತ್ಯನಾರಾಯಣರಾವ್ ದಾಳಿ ಬಗ್ಗೆ ಮಾಹಿತಿ ನೀಡಿದರು.

ಕೆ.ವಿ.ಸರ್ವೇಶ್, ನಿರ್ದೇಶಕ, ಬೆಂಗಳೂರು ಕೃಷಿ ಇಲಾಖೆ. ಅಕ್ರಮ ಆಸ್ತಿ ಪ್ರಮಾಣ: ಶೇ.315
ಕನಕಪುರ ರಸ್ತೆ ಕೃಷ್ಣ ಹಿಲ್ಸ್‌ನಲ್ಲಿ 50 ಲಕ್ಷ ಬೆಲೆಬಾಳುವ ಮನೆ, ಬೆಂಗಳೂರಿನ ವಿಜಯನಗರದ ಎಂ.ಸಿ. ಬಡಾವಣೆಯಲ್ಲಿ ಮನೆ 8 ಲಕ್ಷ, ಬೆಳಂದೂರು ಗ್ರಾಮದಲ್ಲಿ 10 ಲಕ್ಷ ಬೆಲೆ ಬಾಳುವ ಎರಡು ಸೈಟ್‌ಗಳು, ಬೇಗೂರು ಹೋಬಳಿ ಅಕ್ಷಯ ನಗರದಲ್ಲಿ ಎರಡು ಕಟ್ಟಡಗಳ ಮೌಲ್ಯ 30 ಲಕ್ಷ. ವಿವಿಧ ಬ್ಯಾಂಕುಗಳಲ್ಲಿ ತಮ್ಮ ಹಾಗೂ ಪತ್ನಿ ಮತ್ತು ಕುಟುಂಬದವರ ಹೆಸರಿನಲ್ಲಿ 20 ಲಕ್ಷ, 643 ಗ್ರಾಂ ಚಿನ್ನಾಭರಣಗಳು, 9 ಕೆ.ಜಿ ಬೆಳ್ಳಿ, ಎಲ್‌ಐಸಿ, ಕೆಜಿಐಡಿ, ಜಿಪಿಎಫ್ ಸೇರಿದಂತೆ ವಿವಿಧೆಡೆ 16.36 ಲಕ್ಷ ಹೂಡಿಕೆ, 1 ಸ್ವಿಫ್ಟ್ ಹಾಗೂ 1 ಜೆನ್ ಕಾರು, 10 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು. 3100 ಯುರೋ ಹಣ. ಇನ್ನೆರಡು ಬ್ಯಾಂಕ್ ಲಾಕರ್‌ಗಳನ್ನು ತೆರೆಯಬೇಕಿದೆ.                  

ಸೈಯ್ಯದ ಅನ್ವರ್ ಇಸ್ಲಾಂ, ಕಿರಿಯ ಎಂಜಿನಿಯರ್, ಶ್ರೀನಿವಾಸಪುರ ಜಿಲ್ಲಾ ಪಂಚಾಯತಿ ಉಪವಿಭಾಗ ಕೋಲಾರ ಜಿಲ್ಲೆ. ಅಕ್ರಮ ಆಸ್ತಿ ಪ್ರಮಾಣ: ಶೇ.184.76
1995ರಲ್ಲಿ ಸೇವೆಗೆ ಸೇರಿದ ಅನ್ವರ್ ಅವರ ಆದಾಯ 35 ಲಕ್ಷ. ಲೋಕಾಯುಕ್ತ ದಾಳಿ ವೇಳೆ ಸ್ಥಿರಾಸ್ತಿ, ಚರಾಸ್ತಿ ಸೇರಿ ಸುಮಾರು 1 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ. ಉಳಿದಂತೆ ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ಗಳ ಪರಿಶೀಲನೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸುತ್ತಿದ್ದಾರೆ.

ತಿಪ್ಪೇಶಿ.ಎಂ, ಆಯುಕ್ತ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಇಲಾಖೆ. ಅಕ್ರಮ ಆಸ್ತಿ ಪ್ರಮಾಣ: ಶೇ.160
ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ಮನೆ 50 ಲಕ್ಷ, ಹಿರಿಯೂರು ತಾಲೂಕು ಬೀರನಹಳ್ಳಿಯಲ್ಲಿ 20 ಎಕರೆ ಜಮೀನಿನಲ್ಲಿ ಫಾರ್ಮ್‌ಹೌಸ್ 65 ಲಕ್ಷ, ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಫ್ಲ್ಯಾಟ್ 25 ಲಕ್ಷ, 250 ಗ್ರಾಂ ಚಿನ್ನಾಭರಣ, ಏಳುವರೆ ಕೆ.ಜಿ ಬೆಳ್ಳಿ, ಇನ್ನೋವಾ ಕಾರು, 21 ಬ್ಯಾಂಕ್ ಅಕೌಂಟ್‌ಗಳ ಪರಿಶೀಲನೆ.    

ಎಸ್.ಎಂ.ಬಸವರಾಜು, ಮುಖ್ಯ ಎಂಜಿನಿಯರ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಲುಷಿತ ನೀರು ನಿರ್ವಹಣೆ ಮತ್ತು ಕಾರ್ಪೋರೇಟ್ ಯೋಜನೆ. ಅಕ್ರಮ ಆಸ್ತಿ ಪ್ರಮಾಣ: ಶೇ.166
ಎಚ್‌ಆರ್‌ಬಿಆರ್ ಬಡಾವಣೆಯಲ್ಲಿ ಎರಡಂತಸ್ತಿನ ಕಟ್ಟಡದ ಮೌಲ್ಯ 41 ಲಕ್ಷ, ಸಹಕಾರ ನಗರದಲ್ಲಿ ಮೂರಂತಸ್ತಿನ ವಾಣಿಜ್ಯ ಮಳಿಗೆ ಮೌಲ್ಯ 76 ಲಕ್ಷ, ಕಚರಕನಹಳ್ಳಿಯಲ್ಲಿ 18 ಲಕ್ಷ ಬೆಲೆಬಾಳುವ ಸೈಟ್, ಸಿದ್ಧಾರ್ಥ ನಗರ ಹಾಗೂ ವಿಜಯನಗರದಲ್ಲಿ ಎರಡು ಸೈಟ್‌ಗಳ ಮೌಲ್ಯ 12 ಲಕ್ಷ, ಗೃಹೋಪಯೋಗಿ ವಸ್ತುಗಳು 32 ಲಕ್ಷ, 50 ಲಕ್ಷ ಬೆಲೆಬಾಳುವ 2,240 ಗ್ರಾಂ ಚಿನ್ನಾಭರಣ, ವಿವಿಧ ಬ್ಯಾಂಕ್‌ಗಳಲ್ಲಿ ಬ್ಯಾಲೆನ್ಸ್ ರು. 18.70 ಲಕ್ಷ, ಮಾರ್ಗದರ್ಶಿ ಚಿಟ್‌ಫಂಡ್‌ನಲ್ಲಿ ಉಳಿತಾಯ ಹಣ 37 ಲಕ್ಷ, ಜಿಪಿಎಫ್ ಸೇರಿ ಉಳಿತಾಯ 6 ಲಕ್ಷ, ಮಿತ್ಸುಬಿಷಿ ಕಾರು 23 ಲಕ್ಷ, ವರ್ನಾ ಕಾರು 9 ಲಕ್ಷ, ವಿವಿಧ ಬ್ಯಾಂಕ್‌ಗಳ ಲಾಕರ್‌ಗಳನ್ನು ತೆರೆಯಬೇಕಿದೆ.
ರಾಜಾಭಕ್ಷ್ ಗರೀಬ್‌ಸಾಬ್ ಗುಡಿಗೇರಿ,
ಕೃಷಿ ಸಹಾಯಕ ಅಧಿಕಾರಿ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕು.
ಅಕ್ರಮ ಆಸ್ತಿ ಪ್ರಮಾಣ: ಶೇ. 58.52
ಹಾವೇರಿ ನಗರದಲ್ಲಿ ಮನೆ ಮೌಲ್ಯ 20.91 ಲಕ್ಷ, ವಾಣಿಜ್ಯ ಕಟ್ಟಡ 3 ಲಕ್ಷ, ಹಳೇ ಮನೆ ರಿಪೇರಿ 18 ಲಕ್ಷ, ಎರಡು ಟ್ರ್ಯಾಕ್ಟರ್‌ಗಳು 8 ಲಕ್ಷ, ಗೃಹೋಪಯೋಗಿ ವಸ್ತುಗಳು 2 ಲಕ್ಷ.
ಪಿ.ಬಿ.ಚನ್ನಬಸ್ಸಪ್ಪ,
ಕಾರ್ಯನಿರ್ವಾಹಕ ಎಂಜಿನಿಯರ್, ಜಿಲ್ಲಾ ಪಂಚಾಯತ್ ಚಿತ್ರದುರ್ಗ.
ಅಕ್ರಮ ಆಸ್ತಿ ಪ್ರಮಾಣ: ಶೇ. 189.18
ಹುಬ್ಬಳ್ಳಿ ಶಿರೂರು ಪಾರ್ಕ್ ಬಳಿ ಮನೆ ಮೌಲ್ಯ 50 ಲಕ್ಷ, ದಾವಣಗೆರೆಯಲ್ಲಿ ಎರಡಂತಸ್ತಿನ ಮನೆ ಮೌಲ್ಯ ರು. 25 ಲಕ್ಷ,  ನೆಲಮಂಗಲದಲ್ಲಿ ಸೈಟ್ 7.20 ಲಕ್ಷ, 700 ಗ್ರಾಂ ಚಿನ್ನಾಭರಣ, 6 ಕೆ.ಜಿ ಬೆಳ್ಳಿ, ಗೃಹೋಪಯೋಗಿ ವಸ್ತುಗಳ ಮೌಲ್ಯ 6 ಲಕ್ಷ, ಮಾರುತಿ ವ್ಯಾಗನ್ ಹಾಗೂ ಹುಂಡೈ ಕಾರು.
ಮಹ್ಮದ್ ಯಾಸೀನ್,
ಕಂದಾಯ ನಿರೀಕ್ಷಕ, ಹಾವೇರಿ.
ಅಕ್ರಮ ಆಸ್ತಿ ಪ್ರಮಾಣ: ಶೇ.212.33
ಹುಬ್ಬಳ್ಳಿ ಕೌಲ್‌ಪೇಟೆಯಲ್ಲಿ ಮನೆ 18 ಲಕ್ಷ, ಖಾಲಿ ಜಾಗ 7.90 ಲಕ್ಷ, ಹಾವೇರಿಯಲ್ಲಿ ಸೈಟ್ 3.23 ಲಕ್ಷ, ಚಿನ್ನ ಹಾಗೂ ಬೆಳ್ಳಿ ವಸ್ತುಗಳು 3 ಲಕ್ಷ.
ಕೆ.ರಾಮದಾಸ್,
ವಲಯ ಅರಣ್ಯಾಧಿಕಾರಿ, ಶ್ರೀರಂಗಪಟ್ಟಣ.
ಅಕ್ರಮ ಆಸ್ತಿ ಪ್ರಮಾಣ: ಶೇ. 486.
ಮಂಡ್ಯ ನಗರ ಉದಯಗಿರಿಯಲ್ಲಿ ಎರಡಂತಸ್ತಿನ ಮನೆ 20 ಲಕ್ಷ, ಮೂರಂತಸ್ತಿನ ವಾಣಿಜ್ಯ ಮಳಿಗೆ 50 ಲಕ್ಷ, ಬೆಂಗಳೂರು ಉಲ್ಲಾಳ ಉಪನಗರದಲ್ಲಿ ಕಟ್ಟಡ 30 ಲಕ್ಷ, ಮೈಸೂರಿನಲ್ಲಿ ಸೈಟ್ 20 ಲಕ್ಷ, ಮಂಡ್ಯ ಬಳಿ ಕೃಷಿ ಜಮೀನು 22 ಲಕ್ಷ, 680 ಗ್ರಾಂ ಚಿನ್ನಾಭರಣ, ಮಾರುತಿ ಓಮ್ನಿ ಹಾಗೂ ಮಾರುತಿ ಸ್ವಿಫ್ಟ್ ಕಾರು, ಗೃಹೋಪಯೋಗಿ ವಸ್ತುಗಳು 8 ಲಕ್ಷ.
ಡಾ.ಕೆ.ಜಗದೀಶ್,
ವೈದ್ಯಕೀಯ ಅಧಿಕಾರಿ, ಚಿತ್ರದುರ್ಗ ಜಿಲ್ಲಾಸ್ಪತ್ರೆ.
ಅಕ್ರಮ ಆಸ್ತಿ ಪ್ರಮಾಣ: ಶೇ.159
ಚಿತ್ರದುರ್ಗದಲ್ಲಿ ಮನೆ 60 ಲಕ್ಷ, ಜಮೀನು 7.20 ಲಕ್ಷ, ಆನೇಕಲ್ ಹಾಗೂ ಅತ್ತಿಬೆಲೆ ಬಳಿ ಎರಡು ಜಮೀನುಗಳು, ನಗದು ಚಿನ್ನಾಭರಣ 20 ಲಕ್ಷ, ಮಹೀಂದ್ರಾ ಕಾರು, ಟಾಟಾ ನ್ಯಾನೋ ಕಾರು ಪತ್ತೆಯಾಗಿವೆ. ಇವರಿಗೆ ಸೇರಿದ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಬೇಕಿದೆ.
ಚನ್ನಬಸಪ್ಪ,
ಕಾರ್ಯನಿರ್ವಾಹಕ ಅಧಿಕಾರಿ, ಮೂಡಿಗೆರೆ ತಾಲೂಕು ಪಂಚಾಯತಿ,
ಅಕ್ರಮ ಆಸ್ತಿ ಪ್ರಮಾಣ ಶೇ. 287
ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ ಮನೆ 16.54 ಲಕ್ಷ, ಸಿಡಿಎ ಸೈಟ್ 4.20 ಲಕ್ಷ, 1 ಟ್ರ್ಯಾಕ್ಟರ್, 4.5 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments