ಶ್ರೀನಿವಾಸನ್ ಮನೆ ಮೇಲೆ ಸಿಬಿಐ ದಾಳಿ
ಆಮದು ಕಾರುಗಳ ಹಗರಣಕ್ಕೆ ಸಂಬಂಧಿಸಿ ಸಿಬಿಐ ಶುಕ್ರವಾರ ಉದ್ಯಮಿ, ಬಿಸಿಸಿಐ ಮುಖ್ಯಸ್ಥ ಎನ್. ಶ್ರೀನಿವಾಸನ್ ಮನೆ ಮೇಲೂ ದಾಳಿ ನಡೆಸಿದ್ದು...
ನವದೆಹಲಿ: ಆಮದು ಕಾರುಗಳ ಹಗರಣಕ್ಕೆ ಸಂಬಂಧಿಸಿ ಸಿಬಿಐ ಶುಕ್ರವಾರ ಉದ್ಯಮಿ, ಬಿಸಿಸಿಐ ಮುಖ್ಯಸ್ಥ ಎನ್. ಶ್ರೀನಿವಾಸನ್ ಮನೆ ಮೇಲೂ ದಾಳಿ ನಡೆಸಿದ್ದು, 11 ಕಾರುಗಳನ್ನು ವಶಪಡಿಸಿಕೊಂಡಿದೆ.
ಶ್ರೀನಿವಾಸನ್ ಅವರಲ್ಲದೆ ಶ್ರೀರಾಮಚಂದ್ರ ಮೆಡಿಕಲ್ ಕಾಲೇಜ್ ಛಾನ್ಸೆಲರ್ ಮತ್ತು ಇತರೆ ಉದ್ಯಮಿಗಳು ಹಾಗೂ ಎಂಜಿಎಂ ಗ್ರೂಪ್ ಆಫ್ ಕಂಪನೀಸ್‌ಗಳ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಛಾನ್ಸೆಲರ್ ಮನೆಯಿಂದ 7, ಉದ್ಯಮಿ ಜಿ.ಕೆ. ಶೆಟ್ಟಿ ರಾಮಣ್ಣ ಮನೆಯಿಂದ 5, ಎಂಜಿಎಂ ಗ್ರೂಪ್ ಆಫ್ ಕಂಪನೀಸ್ ಮತ್ತು ರಾಜಾ ಶಂಕರ್ ಕಂಪನಿಗಳಿಂದ ತಲಾ 2 ಮತ್ತು ಜೆಆರ್‌ಎ ಟವರ್ಸ್ ಗ್ರೂಪ್ ಮಾಲೀಕರ ಮನೆಯಿಂದ ಒಂದು ವಾಹನ ವಶಪಡಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ, ಚೆನ್ನೈ ಹಗರಣವು ದೇಶದಲ್ಲೇ ಅತೀ ದೊಡ್ಡ ಆಮದಿತ ಕಾರುಗಳ ಹಗರಣವಾಗಿದೆ. ಇದರಲ್ಲಿ ಆದಾಯ ಗುಪ್ತಚರ ದಳದ ಮಹಾನಿರ್ದೇಶನಾಲಯದ ಅಧಿಕಾರಿಗಳೂ ಶಾಮೀಲಾಗಿರುವ ಸಾಧ್ಯತೆ ಇದೆ. ಈ ಮೂಲಕ ಸರ್ಕಾರದ ಖಜಾನೆಗೆ 50 ಕೋಟಿ ವಂಚಿಸಲಾಗಿದೆ.
ಸಿಬಿಐ ಅಧಿಕಾರಿಗಳು ಡಿಎಂಕೆ ಮುಖಂಡರಾದ ಅಳಗಿರಿ, ಎಂ.ಕೆ. ಸ್ಟಾಲಿನ್ ಸೇರಿ ಅನೇಕ ರಾಜಕಾರಣಿಗಳು, ಉದ್ಯಮಿಗಳ ಮನೆಗಳ ಮೇಲೆ ದಾಳಿ ನಡೆಸಿ 33 ವಿದೇಶಿ ಕಾರುಗಳನ್ನು ವಶಪಡಿಸಿಕೊಂಡಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.