ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎಷ್ಟಿದ್ದರೂ ಸಾಕಾಗಲ್ಲ ಗುರುತು

ಆಧಾರ್, ಪಾಸ್‌ಪೋರ್ಟ್, ಪಾನ್ ಕಾರ್ಡ್, ಎನ್‌ಪಿಆರ್... ಈ ಗುರುತಿನ ಚೀಟಿಗಳ ಪಟ್ಟಿ ಹೀಗೇ ಬೆಳೆಯುತ್ತಾ ಹೋಗುತ್ತದೆ. ಇಷ್ಟಿದ್ದರೂ ನಮ್ಮ ಗುರುತಿಗಾಗಿ ನಾವು ಪರದಾಡುತ್ತಿದ್ದೇವೆ!...

Parashurama
Updated On : 24 Mar 2013, 1:31 am

ನವದೆಹಲಿ: ಆಧಾರ್, ಪಾಸ್‌ಪೋರ್ಟ್, ಪಾನ್ ಕಾರ್ಡ್, ಎನ್‌ಪಿಆರ್... ಈ ಗುರುತಿನ ಚೀಟಿಗಳ ಪಟ್ಟಿ ಹೀಗೇ ಬೆಳೆಯುತ್ತಾ ಹೋಗುತ್ತದೆ. ಇಷ್ಟಿದ್ದರೂ ನಮ್ಮ ಗುರುತಿಗಾಗಿ ನಾವು ಪರದಾಡುತ್ತಿದ್ದೇವೆ! 'ನಾನು ಭಾರತೀಯ' ಎಂಬುದನ್ನು ಖಾತ್ರಿಪಡಿಸಲು ಯಾವ ಗುರುತಿನ ಚೀಟಿ ಹೊಂದಿರಬೇಕು ಎಂಬ ಗೊಂದಲದಲ್ಲೇ ಎಷ್ಟೋ ಮಂದಿ ದಿನದೂಡುತ್ತಿದ್ದಾರೆ.
ಯಾವುದು ಗುರುತು?: 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಧಾರ್ ಕಡ್ಡಾಯ ಎಂದು ಘೋಷಿಸಲಾಗಿದ್ದರೂ, ಈವರೆಗೆ ದೇಶಾದ್ಯಂತ ಕೇವಲ 30 ಕೋಟಿ ಮಂದಿಗೆ ಮಾತ್ರ ಈ ಸಂಖ್ಯೆ ನೀಡಲಾಗಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಯೋಜನೆ ನೆನೆಗುದಿಯಲ್ಲೇ ಇದೆ. ವೇತನರಹಿತ ಜನರಿಗೆ ಪಾನ್ ಕಾರ್ಡ್ ಹೊಂದುವುದು ಸವಾಲಾಗಿದೆ.               

ಭಾರತೀಯರಲ್ಲಿ ಪಾಸ್‌ಪೋರ್ಟ್ ಹೊಂದಿದವರಂತೂ ಹೆಚ್ಚು ಮಂದಿ ಇಲ್ಲ. ರಾಷ್ಟ್ರ ರಾಜಧಾನಿಯಲ್ಲಂತೂ ವಲಸಿಗರಿಗೆ ಬ್ಯಾಂಕ್ ಖಾತೆ ತೆರೆಯಲೂ ಸಾಧ್ಯವಾಗುತ್ತಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಭಾರತೀಯರು ತಮ್ಮ ಗುರುತನ್ನು ಊರ್ಜಿತಗೊಳಿಸಲು ಹೇಗೆ ಸಾಧ್ಯ ಎಂಬುದೇ ಈಗಿನ ಯಕ್ಷಪ್ರಶ್ನೆಯಾಗಿದೆ.  ಒಟ್ಟಾರೆಯಾಗಿ ನಮ್ಮ ಮುಂದೆ ಗುರುತಿನ ಚೀಟಿಗಳ ಹೊಳೆಯೇ ಇದ್ದರೂ, ಯಾವುದನ್ನು ಯಾವುದಕ್ಕೆ ಹೊಂದಿರಬೇಕು ಎಂಬ ಗೊಂದಲದಲ್ಲೇ ಕಾಲಕಳೆಯಬೇಕಾಗಿದೆ.
 
 ಪಡಿತರ ಚೀಟಿ
ಒದಗಿಸುವವರು- ರಾಜ್ಯ ಸರ್ಕಾರಗಳು
ಉದ್ದೇಶ- ಪಡಿತರ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಲು ಬಳಸಲಾಗುತ್ತದೆ. ಇದು ಗುರುತಿನ ಚೀಟಿಯಾಗಿಯೂ ಕಾರ್ಯನಿರ್ವಹಿಸುತ್ತದೆ.

    ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್)
ಒದಗಿಸುವವರು- ಗೃಹ ಸಚಿವಾಲಯ
ಉದ್ದೇಶ- ಇದೊಂದು ಪ್ರಸ್ತಾವಿತ ಸ್ಮಾರ್ಟ್ ಕಾರ್ಡ್. ಇದರಲ್ಲಿ ಆಧಾರ್ ಸಂಖ್ಯೆಯೂ ಒಳಗೊಂಡಿರುತ್ತದೆ. ಸರ್ಕಾರಿ ಯೋಜನೆಗಳ ಲಾಭದ ಸೂಕ್ತ ಅನುಷ್ಠಾನ ಮತ್ತು ಬಳಕೆಗಾಗಿ ಇದನ್ನು ಪ್ರಸ್ತಾಪಿಸಲಾಗಿದೆ. ವಿಶೇಷ ಗುರುತಿನ ಸಂಖ್ಯೆ ಹೊಂದಿರುವವರೂ ಎನ್‌ಪಿಆರ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
   
ಆಧಾರ್
ಒದಗಿಸುವವರು- ಯೋಜನಾ ಆಯೋಗದಡಿಯಲ್ಲಿರುವ ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರ.
ಉದ್ದೇಶ- ಪಿಡಿಎಸ್, ಬ್ಯಾಂಕ್ ಖಾತೆ ತೆರೆಯಲು, ವಿಮಾನ, ರೈಲು ಟಿಕೆಟ್ ಕಾಯ್ದಿರಿಸಲು, ಪಿಂಚಣಿ ಪಡೆಯಲು, ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಲು, ಗ್ಯಾಸ್ ಸಂಪರ್ಕಕ್ಕೆ, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಈ ವಿಶೇಷ ಗುರುತಿನ ಸಂಖ್ಯೆಯನ್ನು ಒದಗಿಸಲಾಗುತ್ತದೆ.
 
  ಪಾಸ್‌ಪೋರ್ಟ್
ಒದಗಿಸುವವರು- ವಿದೇಶಾಂಗ ಸಚಿವಾಲಯ
ಉದ್ದೇಶ- ವಿದೇಶ ಪ್ರಯಾಣಕ್ಕೆ. ಇದನ್ನು ಬ್ಯಾಂಕ್ ಖಾತೆ ತೆರೆಯುವಾಗ, ದೂರವಾಣಿ ಸಂಪರ್ಕ ಪಡೆಯುವಾಗ ನಿವಾಸದ ಪುರಾವೆ ನೀಡಲೂ ಬಳಸಬಹುದು.
 
  ಮತದಾರರ ಗುರುತಿನ ಚೀಟಿ
ಒದಗಿಸುವವರು- ಚುನಾವಣಾ ಆಯೋಗ
ಉದ್ದೇಶ- 18 ವರ್ಷ ತುಂಬಿದ ಬಳಿಕ ಹಕ್ಕು ಚಲಾಯಿಸಲು ಅರ್ಹತೆ ಪಡೆಯಲು ಇದನ್ನು ಹೊಂದಿರಬೇಕು. ಬ್ಯಾಂಕ್ ಖಾತೆ ತೆರೆಯಲು, ದೂರವಾಣಿ ಸಂಪರ್ಕ, ಚಾಲನಾ ಪರವಾನಗಿ ಪಡೆಯಲೂ ಬಳಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments