ಸ್ಲಿಪ್ನಲ್ಲಿ ಯತ್ನಾಳ ಭಾವಚಿತ್ರ: ಆರೋಪ
ಬಿಜಾಪುರ: ನಗರ ಹೊರ ವಲಯದ ಬೂತನಾಳ ತಾಂಡಾದ ಮತಗಟ್ಟೆಯಲ್ಲಿ ವಿತರಿಸಿದ ವೋಟರ್ ಸ್ಲಿಪ್ನಲ್ಲಿ ಬಿಜಾಪುರ ವಿಧಾನಸಭೆ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಅವರ ಭಾವಚಿತ್ರ ಮುದ್ರಿಸಿರುವುದನ್ನು ವಿತರಿಸಿ ಮತದಾರರ ಮೇಲೆ ಪ್ರಭಾವ ಬೀರಲಾಗಿದೆ. ಯತ್ನಾಳ ಅವರನ್ನು ಚುನಾವಣೆ ಕಣದಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ ಅವರು ಒತ್ತಾಯಿಸಿದರು. ಜೆಡಿಎಸ್ ಪಕ್ಷದಿಂದ ರಾಜಾರೋಷವಾಗಿ ದುಡ್ಡು ಹಂಚುವುದು ಕಂಡು ಬಂತು ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.