ಹಕ್ಕು ಚಲಾಯಿಸಿದ ಬುದ್ಧಿಮಾಂಧ್ಯ
ಹೊನ್ನಾಳಿ: ತಾಲೂಕಿನ ತುಂಗಭದ್ರಾ ಬಡಾವಣೆಯ ಕೂಲಿ ಕೆಲಸ ಮಾಡಿಕೊಂಡು ಜೀವಸಾಗಿಸುತ್ತಿರುವ ಚನ್ನಪ್ಪ ಮತ್ತು ಶಾಂತಮ್ಮ ದಂಪತಿಗಳ ಏಕೈಕ ಪುತ್ರ 23 ವರ್ಷಗಳ ಲೋಕೇಶ್ ಹುಟ್ಟಿನಿಂದಲೇ ಅಂಗವಿಕಲ ಹಾಗೂ ಬುದ್ಧಿಮಾಂಧ್ಯನಾಗಿದ್ದು ನಿಂತುಕೊಳ್ಳುವುದೂ ಆತನಿಗೆ ಕಷ್ಟ.
ಭಾನುವಾರ ನಡೆದ ವಿಧಾನಸಭಾ ಚುನಾವಣೆಗೆ ಮತಗಟ್ಟೆ ಸಂಖ್ಯೆ 71ರಲ್ಲಿ ವಯಸ್ಸಾದ ಚನ್ನಪ್ಪ ಅವರು ಕಷ್ಟ ಪಟ್ಟು ತಮ್ಮ ಮಗ ಲೋಕೇಶ್ನನ್ನು ತಾವೇ ಎತ್ತಿಕೊಂಡು ಮತಗಟ್ಟೆಯವರೆಗೆ ಬಂದು ಆತನಿಂದ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಲೋಕೇಶ್ ತಾಯಿ ಶಾಂತಮ್ಮ ಕೂಡ ತನ್ನ ಮಗನ ಸಹಾಯಕ್ಕೆ ಆತನ ಜೊತೆಯಲ್ಲಿದ್ದರು.