ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಪ್ಪುಹಣ ದಂಧೆ ಆರೋಪಕ್ಕೆ ಕ್ರಮ ಕೈಗೊಳ್ಳಿ: ಕೇಂದ್ರ ಸರ್ಕಾರ

Mainashree
Updated On : 6 May 2013, 11:10 am

ನವದೆಹಲಿ: ಎಸ್‌ಬಿಐ, ಎಲ್‌ಐಸಿ ಸೇರಿದಂತೆ 23 ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸ್ವಾಮ್ಯದ ವಿಮೆ ಮತ್ತು ಬ್ಯಾಂಕಿಂಗ್ ಸಂಸ್ಥೆಗಳು ಕಪ್ಪುಹಣವನ್ನು ಬಿಳಿಹಣ ಮಾಡುವ ದಂಧೆಯಲ್ಲಿ ತೊಡಗಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಎಲ್‌ಐಸಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಆದೇಶ ನೀಡಿದೆ. ಇದರ ಜತೆಗೆ ವಿಮಾ ಸಂಸ್ಥೆಗಳ ವಿರುದ್ಧವೂ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎ) ಕೂಡ ತನಿಖೆಗೆ ಮುಂದಾಗಿದೆ.
ಕೋಬ್ರಾಪೋಸ್ಟ್ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಕ್ಷೇತ್ರದ ಹಣಕಾಸು ಮತ್ತು ವಿಮಾ ಸಂಸ್ಥೆಗಳು ಕಪ್ಪುಹಣವನ್ನು ಬಿಳಿಹಣವನ್ನಾಗಿ ಪರಿವರ್ತಿಸುವ ದಂಧೆಯಲ್ಲಿ ತೊಡಗಿವೆ ಎಂದು ಆರೋಪಿಸಿತ್ತು.  ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಗಳನ್ನು ಉಲ್ಲಂಘಿಸಿ ಖಾತೆಗಳನ್ನು ತೆರೆಯುವಲ್ಲಿ ನೆರವಾಗಿವೆ. ಜತೆಗೆ ಫೆಮಾ ಮತ್ತು ನೋ ಯುವರ್ ಕಸ್ಟಮರ್ ನಿಯಮಗಳನ್ನೂ ಉಲ್ಲಂಘಿಸಿವೆ ಎಂದು ವೆಬ್‌ಸೈಟ್ ಆರೋಪಿಸಿದೆ. ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿವಿಧ ಬ್ಯಾಂಕ್‌ಗಳು ಮತ್ತು ವಿಮಾ ಸಂಸ್ಥೆಗಳ ಮುಖ್ಯಸ್ಥರು ಅಕ್ರಮ ನಡೆದಿದೆ ಎಂದಾದಲ್ಲಿ ಕಠಿಣ ಕ್ರಮ ಕೈಗೊಳ್ಳುವ ವಾಗ್ದಾನ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement