ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಳೇ ದ್ವೇಷ: ಸ್ವಿಫ್ಟ್ ಕಾರಿಗೆ ಆ್ಯಸಿಡ್ ಎರಚಿದ ಕಿಡಿಗೇಡಿಗಳು

Mainashree
Updated On : 7 May 2013, 11:02 am

ಕ.ಪ್ರ.ವಾರ್ತೆ  ಭಾರತೀನಗರ  ಮೇ 7
ಇಲ್ಲಿಗೆ ಸಮೀಪದ ಮುಟ್ಟನಹಳ್ಳಿಯಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಗಳು ಆ್ಯಸಿಡ್ ಸುರಿದಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಗ್ರಾಮದ ಮುಖಂಡ ಎನ್.ಶಿವಲಿಂಗೇಗೌಡ ಅವರು ಇತ್ತೀಚೆಗಷ್ಟೇ 3.5 ಲಕ್ಷ ನೀಡಿ ಮಾರುತಿ ಸ್ವಿಫ್ಟ್ ಕಾರು ಖರೀದಿಸಿದ್ದರು.  ಎಂದಿನಂತೆ ಕಾರನ್ನು ಮನೆ ಮುಂದೆ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ರಾತ್ರಿ ದುಷ್ಕರ್ಮಿಗಳು ಆ್ಯಸಿಡ್ ಸುರಿದು ಪರಾರಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಎದ್ದು ನೋಡಿದಾಗ ಕಾರು ವಿಕೃತವಾಗಿ ಕಂಡಿದ್ದು ಪರಿಶೀಲಿಸಿದಾಗ ಕಿಡಿಗೇಡಿಗಳ ಕೃತ್ಯ ಬಯಲಾಗಿದೆ.
ಕೆಲ ವರ್ಷಗಳ ಹಿಂದೆ ಸಾರಾಯಿ ನಿಷೇಧ ಮಾಡುವ ಕುರಿತು ಗ್ರಾಮದ ಯಜಮಾನರೊಂದಿಗೆ ಪಂಚಾಯಿತಿ ತೀರ್ಮಾನ ಮಾಡಿ ಸಾರಾಯಿ ಮುಕ್ತ ಗ್ರಾಮ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಚುನಾವಣೆ ಸಂದರ್ಭ ಬಳಸಿಕೊಂಡು ದ್ವೇಷಕ್ಕೆ ಪರ್ಯಾಯವಾಗಿ ಈ ಕೃತ್ಯ ಎಸಗಲಾಗಿದೆ. ಶ್ರೀನಿವಾಸ್, ಗೋವಿಂದಯ್ಯ ಎಂಬವರ ಮೇಲೆ ನನಗೆ ಸಂಶಯವಿದೆ ಎಂದು ಶಿವಲಿಂಗೇಗೌಡ ಭಾರತೀನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement