ಪ್ರಧಾನಿ ಸಿಂಗ್ ಜೇಬಲ್ಲಿ ಹಣವೇ ಇಲ್ಲವಂತೆ!
ನಮ್ಮ ಪ್ರಧಾನಿ ಮನಮೋಹನ ಸಿಂಗ್ ಅವರ ಒಟ್ಟು ವಾರ್ಷಿಕ ಆದಾಯ ಎಷ್ಟು ಗೊತ್ತಾ? 40,51,964!...
ನವದೆಹಲಿ: ನಮ್ಮ ಪ್ರಧಾನಿ ಮನಮೋಹನ ಸಿಂಗ್ ಅವರ ಒಟ್ಟು ವಾರ್ಷಿಕ ಆದಾಯ ಎಷ್ಟು ಗೊತ್ತಾ? 40,51,964!
ಅಸ್ಸಾನಿಂದ ರಾಜ್ಯಸಭೆಗೆ ಪುನರಾಯ್ಕೆ ಬಯಸಿ ಬುಧವಾರ ನಾಮಪತ್ರ ಸಲ್ಲಿಸಿದ ವೇಳೆ ಸಿಂಗ್ ಅವರು ಸಲ್ಲಿಸಿದ ಅಫಿಡವಿಟ್ನಲ್ಲಿ ಈ ವಿಚಾರ ತಿಳಿಸಿದ್ದಾರೆ. ಆದರೆ, ಸಿಂಗ್ ಅವರ ಕೈಯಲ್ಲಿ ಯಾವುದೇ ನಗದು ಇಲ್ಲ. ಆದರೆ, ಪತ್ನಿ ಕೈಯಲ್ಲಿ 20 ಸಾವಿರ ನಗದು ಇದೆ. ವಿಶೇಷವೆಂದರೆ ದೇಶದ ಪ್ರಧಾನಿಯಾದರೂ ಸಿಂಗ್ ಅವರು ಈಗಲೂ ಇಟ್ಟುಕೊಂಡಿರುವುದು ಒಂದೇ ಕಾರು. ಅದು 1996ನೇ ಮಾಡೆಲ್ನ ಮಾರುತಿ- 800. ಇದರ ಮಾರುಕಟ್ಟೆ ಮೌಲ್ಯ 21,033 ಎಂದು ಅವರೇ ಹೇಳಿಕೊಂಡಿದ್ದಾರೆ.
ಚರ ಆಸ್ತಿ: ಸಿಂಗ್ ಅವರು ಒಟ್ಟು 38,763,188 ಚರ ಆಸ್ತಿ ಹೊಂದಿದ್ದಾರೆ. ಇವುಗಳನ್ನು ಐದು ನಿಶ್ಚಿತ ಠೇವಣಿ ಹಾಗೂ ಉಳಿತಾಯ ಖಾತೆಯಲ್ಲಿ ಇಟ್ಟಿದ್ದಾರೆ. ಗುವಾಹಟಿಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ದೆಹಲಿಯಲ್ಲಿ 8.26 ಲಕ್ಷ ಮೊತ್ತದ ಎನ್ಎಸ್ಎಸ್ ಸರ್ಟಿಫಿಕೇಟ್ ಹೊಂದಿದ್ದಾರೆ.