ಬೆಂಗಳೂರು: ದ್ವಿತೀಯ ಪಿಯುಸಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಪ್ರಕಟಗೊಂಡಿದ್ದು, ರ್ಯಾಂಕಿಂಗ್ ಪಟ್ಟಿಯಲ್ಲಿ ಹುಡುಗರು ಮೇಲುಗೈ ಸಾಧಿಸಿದ್ದಾರೆ.
ಎಂಜಿನಿಯರಿಂಗ್, ವೈದ್ಯ, ದಂತವೈದ್ಯ ಹಾಗೂ ಐಎಸ್ಎಂಎಚ್ನ ಟಾಪ್-10 ರ್ಯಾಂಕ್ಗಳಲ್ಲಿ ಕೇವಲ ಇಬ್ಬರು ವಿದ್ಯಾರ್ಥಿನಿಯರು ಮಾತ್ರ ಇರುವುದು ಈ ಬಾರಿಯ ವಿಶೇಷ. ಎಂಜಿನಿಯರಿಂಗ್ನಲ್ಲಿ 91,808, ವೈದ್ಯ, ದಂತವೈದ್ಯ ಮತ್ತು ಐಎಸ್ಎಂಎಚ್ನಲ್ಲಿ 68,943, ವಾಸ್ತುಶಿಲ್ಪ ಕೋರ್ಸ್ಗೆ 816, ಕೃಷಿ 74,737 ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ.
ಪಿಸಿಬಿ ಹಾಗೂ ಪಿಸಿಎಂ ವಿಭಾಗದಲ್ಲಿ ಮೊದಲ 5 ರ್ಯಾಂಕ್ ಗಳಿಸಿದ 10 ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಿಕೊಡುವುದಾಗಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಘೋಷಿಸಿದ್ದಾರೆ. ಆದರೆ ಆ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿಯೇ ಓದಬೇಕು.
ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಓಎಂಆರ್ ಪ್ರತಿಯು ಮಂಗಳವಾರ ಸಂಜೆಯಿಂದ ಪ್ರಾಧಿಕಾರದ ವೆಬ್ ತಾಣದಲ್ಲಿ ದೊರೆಯಲಿದೆ. ಈ ಸಂಬಂಧ ವ್ಯತ್ಯಾಸವಿದ್ದಲ್ಲಿ keauthority-ka@nic.in ಗೆ ಮಿಂಚಂಚೆ ಕಳುಹಿಸಬಹುದು. ಒಂದೊಮ್ಮೆ ವಿದ್ಯಾರ್ಥಿಗಳ ರ್ಯಾಂಕ್ ತಡೆಹಿಡಿಯಲ್ಪಟ್ಟಿದ್ದರೆ ಅಂಕಪಟ್ಟಿಯ ಪ್ರತಿಯನ್ನು ಪ್ರಾಧಿಕಾರಕ್ಕೆ ಮಿಂಚಂಚೆ ಮಾಡಿ ರ್ಯಾಂಕ್ ಪಡೆಯಬಹುದಾಗಿದೆ.
ಒಂದೊಮ್ಮೆ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಅಂಕದಲ್ಲಿ ಬದಲಾವಣೆಯಾದರೆ ಶೀಘ್ರದಲ್ಲಿಯೇ ಪಟ್ಟಿಯನ್ನು ನವೀಕರಿಸಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಜೂ.15ರಿಂದ ಆಪ್ಶನ್ ಎಂಟ್ರಿ: ಜೂ.3ರಿಂದ ಜೂ.23ರವರೆಗೆ ದಾಖಲೆಗಳ ಪರಿಶೀಲನೆ ನಡೆಯಲಿದೆ. ಈ ಮಧ್ಯೆಯೇ ಜೂ.15ರಿಂದ ವಿದ್ಯಾರ್ಥಿಗಳು ಆಪ್ಶನ್ ಎಂಟ್ರಿ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಆನ್ಲೈನ್ನಲ್ಲಿ ತಮ್ಮ ಆದ್ಯತೆಯನ್ನು ಆಯ್ಕೆ ಮಾಡಲು ಜೂ.26 ಕೊನೆಯ ದಿನವಾಗಿದೆ. ಜೂ.27ರಂದು ಅಣಕು ಸೀಟು ಹಂಚಿಕೆ ಆಗಲಿದೆ. ಅಣಕು ಹಂಚಿಕೆಯ ಬಳಿಕ ಪಟ್ಟಿಯಲ್ಲಿ ಮತ್ತೆ ಬದಲಾವಣೆ ಮಾಡಲು ಅವಕಾಶವಿರುತ್ತದೆ. ಆಪ್ಶನ್ ಎಂಟ್ರಿ ಅಂತಿಮಗೊಂಡ ಬಳಿಕ ಜೂ.29ರಂದು ಅಂತಿಮ ಹಂತದ ಸೀಟು ಹಂಚಿಕೆ ಪ್ರಕಟವಾಗಲಿದೆ.
ರ್ಯಾಂಕ್ಗಳ ವಿವರ
ಎಂಜಿನಿಯರಿಂಗ್
91,808
ವೈದ್ಯ
38,623
ಐಎಸ್ಎಂಎಚ್
68,943
ಬಿಎಸ್ಸಿ(ಕೃಷಿ)
74,737
ವಾಸ್ತುಶಿಲ್ಪ
816
ವೈದ್ಯ ಹಾಗೂ ದಂತವೈದ್ಯ
1ಹೇಮಂತ ಅಮರ್ದೀಪ್ ಸಂಥೂರ್
ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು
2ಮೇಧಾ ರಾವ್ ಎಕ್ಸ್ಪರ್ಟ್ ಕಾಲೇಜು,
ಮಂಗಳೂರು
3ವಿವೇಕ್ ಮಲೆಯೂರ್
ವಿದ್ಯಾಶ್ರಮ ಪಿಯು ಕಾಲೇಜು, ಮೈಸೂರು
4ಸಚಿನ್ ಕೃಷ್ಣರಾಜ್
ಕೆನರಾ ಪಿಯು ಕಾಲೇಜು, ಮಂಗಳೂರು
5ಶೀತಲ್ ಎಸ್.ಎನ್
ಎಸ್ಆರ್ಎಸ್ ಪಿಯು ಕಾಲೇಜು, ಚಿತ್ರದುರ್ಗ
ಎಂಜಿನಿಯರಿಂಗ್
1ಪ್ರಜ್ವಲ್ ಕೆ.ಎ
ವಿದ್ಯಾವರ್ಧಕ ಸಂಘ, ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು
2ಸುಚೇತ್ ಕಂಚಮ್
ವಿದ್ಯಾವರ್ಧಕ ಸಂಘ, ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು
3ಮನು ಎಸ್.ಎಚ್
ಸರ್ದಾರ್ ಪಟೇಲ್ ಪಿಯು ಕಾಲೇಜು, ಬೆಂಗಳೂರು
4ಸಾಹನ್ ಎಸ್. ಆಳ್ವಾ
ಎಕ್ಸ್ಪರ್ಟ್ ಕಾಲೇಜು, ಮಂಗಳೂರು
5ಅಭಿಷೇಕ್ ಡಿ.
ಶ್ರೀ ವೆಂಕಟೇಶ್ವರ, ಪಿಯು ಕಾಲೇಜು, ಹಾಸನ
ಸಿಇಟಿ ಫಲಿತಾಂಶ ಪ್ರಕಟ
ಸಹಾಯ ಹಾಗೂ ಕೌನ್ಸೆಲಿಂಗ್ ಕೇಂದ್ರಗಳು
1.ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರ- ಬೆಂಗಳೂರು, ಬೆಂಗಳೂರು ಗ್ರಾಮೀಣ, ತುಮಕೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ
2.ವಿದ್ಯಾವರ್ಧಕ ಕಾಲೇಜ್ ಆಫ್ ಎಂಜಿನಿಯರಿಂಗ್, ಮೈಸೂರು- ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ.
3. ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಹಾಸನ- ಹಾಸನ, ಚಿಕ್ಕಮಗಳೂರು, ತುಮಕೂರು, ಮಂಡ್ಯ, ಕೊಡಗು
4. ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು, ಮಂಗಳೂರು- ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು
5. ಜವಾಹರ್ಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಶಿವಮೊಗ್ಗ- ಶಿವಮೊಗ್ಗ, ಹಾವೇರಿ, ಉಡುಪಿ, ಚಿಕ್ಕಮಗಳೂರು
6. ಗಿರಿಜಾಬಾಯಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾರವಾರ- ಉತ್ತರ ಕನ್ನಡ, ಹಾವೇರಿ
7. ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜು, ಧಾರವಾಡ- ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ
8. ಕೆಎಲ್ಇ ಸೊಸೈಟಿ ಆಫ್ ಎಂಜಿನಿಯರಿಂಗ್ ಕಾಲೇಜು, ಬೆಳಗಾವಿ- ಬೆಳಗಾವಿ, ಬಾಗಲಕೋಟೆ
9. ಡಾ.ಪಿ.ಜಿ. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು, ಬಿಜಾಪುರ- ಬಿಜಾಪುರ, ಬಾಗಲಕೋಟೆ
10. ವಿಟಿಯು, ಪಿಜಿ ಸೆಂಟರ್, ಗುಲ್ಬರ್ಗ- ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ
11. ಎಚ್ಕೆಇಎಸ್ಎಸ್ಎಲ್ಎನ್ ಎಂಜಿನಿಯರಿಂಗ್ ಕಾಲೇಜು, ರಾಯಚೂರು- ರಾಯಚೂರು, ಕೊಪ್ಪಳ, ಯಾದಗಿರಿ
12. ರಾವ್ ಬಹದ್ದೂರ್ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು, ಬಳ್ಳಾರಿ- ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ
13. ಬಾಪೂಜಿ ಎಂಜಿನಿಯರಿಂಗ್ ಕಾಲೇಜು, ದಾವಣಗೆರೆ,- ದಾವಣಗೆರೆ, ಚಿತ್ರದುರ್ಗ, ಹಾವೇರಿ
ಸೀಟು ಹಂಚಿಕೆ ಹಾಗೂ ಶುಲ್ಕ ವಿವರ
ಎಂಜಿನಿಯರಿಂಗ್
ಒಟ್ಟು 87,490ಸೀಟುಗಳು
ಸರ್ಕಾರಿ 42,231
ಶುಲ್ಕ 18,090 (ಸರ್ಕಾರಿ ಕಾಲೇಜು)
38,090- 41,590
ವೈದ್ಯಕೀಯ
ಒಟ್ಟು 5298ಸೀಟುಗಳು
ಸರ್ಕಾರಿ 2221
ಶುಲ್ಕ 16,700 (ಸರ್ಕಾರಿ ಕಾಲೇಜು)
46,000
ದಂತ ವೈದ್ಯಕೀಯ
ಒಟ್ಟು 2470ಸೀಟುಗಳು
ಸರ್ಕಾರಿ 847
ಶುಲ್ಕ 14,400