ಹೊಗೇನಕಲ್ ನೀರು ಪೂರೈಕೆ ಯೋಜನೆಗೆ ಜಯಾ ಚಾಲನೆ
1928 ಕೋಟಿ ವೆಚ್ಚದ ವಿವಾದಿತ ಹೊಗೇನಕಲ್ ನೀರು ಪೂರೈಕೆ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬುಧವಾರ ಉದ್ಘಾಟಿಸಿದ್ದಾರೆ...
ಚೆನ್ನೈ: 1928 ಕೋಟಿ ವೆಚ್ಚದ ವಿವಾದಿತ ಹೊಗೇನಕಲ್ ನೀರು ಪೂರೈಕೆ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬುಧವಾರ ಉದ್ಘಾಟಿಸಿದ್ದಾರೆ.
ಜಪಾನ್ನ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ಈ ಯೋಜನೆ ಮೂಲಕ ಕೃಷ್ಣಗಿರಿ ಹಾಗೂ ಧರ್ಮಪುರಿ ಜಿಲ್ಲೆಗೆ ನೀರು ಪೂರೈಕೆಯಾಗಲಿದೆ. ಈ ಎರಡು ಜಿಲ್ಲೆಯ 40 ಲಕ್ಷ ಮಂದಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ.
ಈ ಯೋಜನೆಯು ವಿವಾದಿತ ಹೊಗೇನಕಲ್ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ತೀವ್ರ ವಿರೋಧ ವ್ಯಕ್ತಪಡಿಸಿತ್ತು. 2008ರಲ್ಲಿ ಕನ್ನಡಪರ ಸಂಘಟನೆಗಳು ಯೋಜನೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದವು.