ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಾಳ ದೀಪ ಆರೀತು ಜೋಕೆ!

ದೀಪಾವಳಿ ಬೆಳಕಿನ ಹಬ್ಬ. ಬದುಕಿನ ಕತ್ತಲೆ ಕಳೆದು ಹೊಸ ಬೆಳಕನ್ನು ನೀಡುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಹಬ್ಬದಲ್ಲಿ ಅದೆಷ್ಟೋ...

Mainashree
Updated On : 2 Nov 2013, 4:27 am

ದೀಪಾವಳಿ ಬೆಳಕಿನ ಹಬ್ಬ. ಬದುಕಿನ ಕತ್ತಲೆ ಕಳೆದು ಹೊಸ ಬೆಳಕನ್ನು ನೀಡುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಹಬ್ಬದಲ್ಲಿ ಅದೆಷ್ಟೋ ಮಕ್ಕಳು ಸಹಿತ ಸಾರ್ವಜನಿಕರು ಅಂಧತ್ವಕ್ಕೆ, ಕಿವುಡುತನಕ್ಕೆ ಒಳಗಾಗಿ ತಮ್ಮ ಬಾಳನ್ನು ಕತ್ತಲೆಡೆಗೆ ನೂಕಲ್ಪಡುವುದು ಮಾತ್ರ ವಿಪರ್ಯಾಸ. ಹೀಗಾಗಿ ಪಟಾಕಿ ಸುಡುವಾಗ ಇರಲಿ ಎಚ್ಚರ ಎಂಬುದು ನಮ್ಮ ಆಶಯ.

 ಮುನ್ನೆಚ್ಚರಿಕೆ ಕ್ರಮಗಳು...
- ಅತಿ ಕಡಿಮೆ ಸದ್ದು ಮಾಡುವ ಪಟಾಕಿ ಖರೀದಿಸಿ.
- ರಾಕೆಟ್, ಬಾಂಬ್‌ನಂತಹ ಪಟಾಕಿಗಳು ಅಪಾಯಕಾರಿ.
-ನೈಲಾನ್, ಸಿಲ್ಕ್, ಲೂಸ್ ಬಟ್ಟೆಗಳ ಧರಿಸಬೇಡಿ
- ಪಾದರಕ್ಷೆ ತೊಟ್ಟು ಪಟಾಕಿ ಹಚ್ಚಿ, ಕನ್ನಡಕ ಧರಿಸಿ
- ಪಟಾಕಿ ಸಿಡಿಸುವ ವೇಳೆ 1 ಬಕೆಟ್ ನೀರು ಇರಲಿ
- ಕ್ರೀಡಾಂಗಣ ಅಥವಾ ಖಾಲಿ ಜಾಗದಲ್ಲಿ ಪಟಾಕಿ ಹಚ್ಚಿ
- ಮಕ್ಕಳಿಗೆ ಪಟಾಕಿ ಸಿಡಿಸಲು ಅವಕಾಶ ಕೊಡಬೇಡಿ.

 ಪೆಟ್ಟಾದರೆ ಏನು ಮಾಡಬೇಕು?
- ಕಣ್ಣಿಗೆ ಸಿಡಿದರೆ ತಕ್ಷಣ ಸ್ವಚ್ಛ ಮತ್ತು ಶುದ್ಧ ನೀರಿನಿಂದ ಕಣ್ಣನ್ನು ತೊಳೆಯಿರಿ, ನಂತರ ವೈದ್ಯರ ಬಳಿ ಹೋಗಿ.
- ದೇಹದ ಇನ್ನಾವುದೇ ಭಾಗಗಳಿಗೆ ಸಿಡಿಮದ್ದು ತಗುಲಿದಾಗ ನೀರನ್ನು ಬಳಸಬೇಡಿ. ಅದು ಅಪಾಯಕಾರಿ.

ಹಾಸನ ಸರ್ಕಾರಿ ಆಸ್ಪತ್ರೆ
08172-268444

- ಸುನಿತಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement