ಅಂಗಾರಕ ಯಾತ್ರೆಗೆ ಟಿಕ್... ಟಿಕ್....
ದೇಶದ ಮಹತ್ವಾಕಾಂಕ್ಷೆಯ 'ಮಂಗಳಯಾನ'ಕ್ಕೆ ಭಾನುವಾರದಿಂದ ಕ್ಷಣಗಣನೆ ಆರಂಭವಾಗಿದೆ. ನ.5ರಂದು ಮಧ್ಯಾಹ್ನ 2.38ಕ್ಕೆ ಸರಿಯಾಗಿ...
ದೇಶದ ಮಹತ್ವಾಕಾಂಕ್ಷೆಯ 'ಮಂಗಳಯಾನ'ಕ್ಕೆ ಭಾನುವಾರದಿಂದ ಕ್ಷಣಗಣನೆ ಆರಂಭವಾಗಿದೆ. ನ.5ರಂದು ಮಧ್ಯಾಹ್ನ 2.38ಕ್ಕೆ ಸರಿಯಾಗಿ ಆಂಧ್ರಪ್ರದೇಶದಲ್ಲಿರುವ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ25 ರಾಕೆಟ್ ನಭಕ್ಕೆ ನೆಗೆಯಲಿದೆ.
51 ಅಂಗಾರಕನ ಬಗ್ಗೆ ಕೈಗೊಳ್ಳಲಾಗಿರುವ ಯೋಜನೆಗಳು
21 ಯೋಜನೆಗಳು ಮಾತ್ರ ಯಶಸ್ವಿ
450 ಕೋಟಿ
ನಮಗೇನು ಸಿಗುತ್ತದೆ?
ಯೋಜನೆ ಯಶಸ್ವಿಯಾದರೆ ಇಂಥ ಸಾಧನೆ ಮಾಡಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆ
ಅಮೆರಿಕ, ರಷ್ಯಾ ಮತ್ತು ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಸಂಸ್ಥೆಗಳಿಂದ ಈ ಸಾಧನೆ
ಇದೇ ಮೊದಲು
ಈ ತಿಂಗಳಲ್ಲಿ ಚಂಡಮಾರುತದ ಪ್ರಭಾವ ಹೆಚ್ಚಿದ್ದರೂ ಇದೇ ಮೊದಲ ಬಾರಿಗೆ ಭಾರಿ ಅಪಾಯದ ಸಾಹಸಕ್ಕೆ ಮುಂದಾದ ಭಾರತೀಯ ಬಾಹ್ಯಾಕಾಶ ಸಂಸ್ಥೆ
ಉದ್ದೇಶಗಳೇನು?
ಮಿಥೇನ್ ಅನಿಲದ ಬಗ್ಗೆ ಅಧ್ಯಯನ
ಜೀವಿಗಳಿವೆಯೇ ಎಂದು ಅಧ್ಯಯನ ನಡೆಸಲು
ಅಲ್ಲಿನ ವಾತಾವರಣದ ಬಗ್ಗೆ ಅಧ್ಯಯನ ನಡೆಸಲು