ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಫೇಸ್‌ಬುಕ್ಕಲ್ಲಿ ಬೀದರ್ ಡಿಸಿಯಿಂದ ಅವಹೇಳನ ಪೋಸ್ಟ್

Mainashree
Updated On : 6 Nov 2013, 1:29 am

ಬೀದರ್: ಹಿಂದೂ ಧರ್ಮೀಯರ ಆರಾಧ್ಯ ದೇವರಾದ ರಾಮ-ಸೀತೆಯರ ಕುರಿತಂತೆ ಜಿಲ್ಲಾಧಿಕಾರಿ ಡಾ. ಪಿ.ಸಿ ಜಾಫರ್ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್ (ಎಫ್‌ಬಿ)ನಲ್ಲಿ ಅವಹೇಳನಕಾರಿ ಲೇಖನವೊಂದನ್ನು ಪೋಸ್ಟ್ ಮಾಡಿದ್ದು, ಇದಕ್ಕೆ ಬಹಿರಂಗ ಕ್ಷಮೆಯಾಚಿಸಬೇಕೆಂದು ಬಜರಂಗದಳ ಆಗ್ರಹಿಸಿದೆ. ನ.3ರಂದು ಡಿಸಿ ತಮ್ಮ ವೈಯಕ್ತಿಕ ಅಕೌಂಟ್‌ನಲ್ಲಿ ದೀಪಾವಳಿ ಹಬ್ಬದ ಕುರಿತಂತೆ ತಾಯಿ ಮಗನ ಮಧ್ಯೆ ನಡೆಯುವ ಸಂಭಾಷಣೆಯೊಂದನ್ನು ಲಗತ್ತಿಸಿದ್ದಾರೆ. ಇದರಲ್ಲಿ ಶ್ರೀರಾಮನಿಗೆ 'ಡ್ಯೂಡ್‌', ಸೀತೆಗೆ 'ಬೇಬ್‌' ಹಾಗೂ ಕೌಸಲ್ಯೆಗೆ 'ಬಿಚ್‌' ಎಂದು ಸಂಬೋಧಿಸಲಾಗಿದೆ. ಆ ಮೂಲಕ ಹಿಂದುಗಳನ್ನು ಅವಮಾನಿಸಲಾಗಿದೆ. ಇಂಥದ್ದೊಂದು ಕೃತ್ಯ ಡಿಸಿಯಂಥ ಸ್ಥಾನವನ್ನು ಅಲಂಕರಿಸಿದವರಿಗೆ ಶೋಭೆ ತರುವಂಥದ್ದಲ್ಲ ಎಂದು ಬಜರಂಗದಳ ಆರೋಪಿಸಿದೆ. ಜಿಲ್ಲಾ ಆಡಳಿತದ ಚುಕ್ಕಾಣಿ ಹಿಡಿದಿರುವ ಜಾಫರ್ ಅವರು ಈ ಕೃತ್ಯಕ್ಕೆ ಕೂಡಲೇ ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಬೇಕು. ತಪ್ಪಿದಲ್ಲಿ ಡಿಸಿ ಸ್ಥಾನದಿಂದ ವಜಾಗೊಳಿಸುವವವರೆಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಬಜರಂಗದಳದ ನೀಲೇಶ್ ರಕ್ಷಾಳ ಮತ್ತು ವಿನೋದ್ ಪಾಟೀಲ್ ಎಚ್ಚರಿಸಿದ್ದಾರೆ. ಡಿಸಿ ಅವರು ಎಫ್‌ಬಿ ಪೋಸ್ಟ್ ಕುರಿತಾಗಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಹಾಗೂ ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಿಗೂ ಪ್ರತಿಗಳನ್ನು ಬಜರಂಗದಳ ಕಳುಹಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement