ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪದ್ಮಕ್ಕೆ ತಟ್ಟಿತು ಶಿಫಾರಸು ಕಳಂಕ

ಪದ್ಮ ಪ್ರಶಸ್ತಿಯಾ...? ಕೊಡೋದಾದ್ರೆ ನನ್ ತಂಗಿಗೂ ಒಂದ್ ಇರ್ಲಿ, ನನ್ನ ನೆಂಟಂಗೂ ಒಂದ್ ಇರ್ಲಿ...! ಇದು ಮೋಹದ ಕರಾಳಪಾಶ. ಸಮಾಜದ...

Mainashree
Updated On : 9 Nov 2013, 10:29 am

ನವದೆಹಲಿ: ಪದ್ಮ ಪ್ರಶಸ್ತಿಯಾ...? ಕೊಡೋದಾದ್ರೆ ನನ್ ತಂಗಿಗೂ ಒಂದ್ ಇರ್ಲಿ, ನನ್ನ ನೆಂಟಂಗೂ ಒಂದ್ ಇರ್ಲಿ...!  ಇದು ಮೋಹದ ಕರಾಳಪಾಶ. ಸಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡುವ ಪದ್ಮ ಪ್ರಶಸ್ತಿಗಳ ಮೇಲೆಯೇ ಸಂದೇಹದಿಂದ ನೋಡುವ ಭಾಗ್ಯ ನಮ್ಮದಾಗಿದೆ.  2013ರಲ್ಲಿ ಪ್ರಶಸ್ತಿಗಾಗಿ ಶಿಫಾರಸು ಮಾಡಿದ ಬಹುತೇಕರು ತಮ್ಮ 'ಬಂಧು ಬಾಂಧವರಿಗೇ' ಕೊಡುವಂತೆ ಕೇಳಿಕೊಂಡಿದ್ದಾರೆ.
ಇಂಥವರಲ್ಲಿ ಕೇಂದ್ರ ಸಚಿವರೂ ಇದ್ದಾರೆ, ಸಮಾಜದ ಗಣ್ಯರೂ ಇದ್ದಾರೆ ಎಂಬುದೇ ದುರ್ದೈವದ ಸಂಗತಿ!  ಈ ಸಂಗತಿ ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಿಗೆ ಬಂದಿದೆ. ಕೇಂದ್ರ ಗೃಹ ಸಚಿವಾಲಯ ಈ ಸಂಗತಿ ಬಹಿರಂಗಗೊಳಿಸಿದೆ. ಒಟ್ಟಾರೆ ಈ ವರ್ಷ 1300 ಶಿಫಾರಸು ಅರ್ಜಿಗಳು ಸಲ್ಲಿಕೆಯಾಗಿದ್ದು, ಬಹುತೇಕರು ತಮ್ಮ ಬಂಧುಬಳಗದವರನ್ನೇ ಆರಿಸಿದ್ದಾರೆ. ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ, ಕೇಂದ್ರ ಸಚಿವ ರಾಜೀವ್ ಶುಕ್ಲಾ, ಸಂಸದ ಟಿ ಸುಬ್ಬರಾಮಿ ರೆಡ್ಡಿ, ಶಾಸ್ತ್ರೀಯ ಸಂಗೀತಗಾರ ಪಂಡಿತ್ ಜಸ್‌ರಾಜ್ ಸೇರಿದಂತೆ ಬಹಳಷ್ಟು ಮಂದಿ ಹಲವಾರು ಹೆಸರುಗಳ ಶಿಫಾರಸು ಮಾಡಿದ್ದಾರೆ.
ಉಷಾ ಮಂಗೇಶ್ಕರ್, ಅಮಾನ್ ಮತ್ತು ಅಯಾನ್  ಹೆಸರುಗಳು ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಇರಲಿಲ್ಲ. ಶಾಸ್ತ್ರೀಯ ಸಂಗೀತಗಾರ ಪಂಡಿತ್ ಜಸ್‌ರಾಜ್  9 ಶಿಫಾರಸುಗಳನ್ನು ಮಾಡಿದ್ದರು. ರಾಜೀವ್ ಶುಕ್ಲಾ 5 ಶಿಫಾರಸುಗಳನ್ನು ಮಾಡಿದ್ದರೆ, ಗೃಹ ಸಚಿವ ಸುಶೀಲ್  ಶಿಂದೆ  ಇಬ್ಬರು ರಂಗಕರ್ಮಿಗಳ ಹೆಸರನ್ನು ಶಿಫಾರಸು ಮಾಡಿದ್ದರು.   ಸಚಿವ ಸಲ್ಮಾನ್ ಖುರ್ಷಿದ್ ಎರಡು ಹೆಸರನ್ನು ಶಿಫಾರಸು ಮಾಡಿದ್ದರು.

ಲಾಬಿ ಮಾಡಿದವರು
-  ಲತಾ ಮಂಗೇಶ್ಕರ್
    ಮೂರು ಶಿಫಾರಸು:     ಸಹೋದರಿ ಉಷಾ ಮಂಗೇಶ್ಕರ್, ಹಿನ್ನೆಲೆ ಗಾಯಕ ಸುರೇಶ್ ವಾಡ್ಕರ್, ಸಾಮಾಜಿಕ ಸೇವಾಕರ್ತ ರಾಜ್‌ಮಲ್ ಪಾರೇಖ್.
-  ಉಸ್ತಾದ್ ಅಮ್ಜದ್ ಅಲಿ ಖಾನ್
    ಆರು ಶಿಫಾರಸು: ಮಕ್ಕಳಾದ ಅಮಾನ್ ಮತ್ತು ಅಯಾನ್, ಹಿಂದೂಸ್ತಾನಿ ಶಾಸ್ತ್ರೀಯ ಹಾಡುಗಾರರಾದ ಕೌಶಿಕಿ ಚಕ್ರವರ್ತಿ, ತಬಲಾ ವಾದಕ ವಿಜಯ್ ಘಾಟೆ, ಕಲಾ ಪ್ರವರ್ತಕ ಸೂರ್ಯ ಕೃಷ್ಣಮೂರ್ತಿ ಅಲಿಯಾಸ್ ನಟರಾಜ ಕೃಷ್ಣಮೂರ್ತಿ ಮತ್ತು ಸಿತಾರ್ ವಾದಕ ನೀಲಾದ್ರಿ ಕುಮಾರ್
- ಅಮರ್ ಸಿಂಗ್
ಜಯಪ್ರದಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement