ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿಕ್ಕಿಹಾಕಿಕೊಂಡಿರುವ ಕನ್ನಡಿಗ

ಫಿಲಿಪ್ಪೀನ್ಸ್‌ನಲ್ಲಿ ಬೀಸುತ್ತಿರುವ ಹಯಾನ್ ಚಂಡಮಾರುತಕ್ಕೆ ಕನ್ನಡಿಗರೊಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ. ತುರುವೇಕೆರೆ ತಾಲೂಕಿನ ಕೆಜೆಪಿ ಮುಖಂಡ...

Rashmi Kasaragodu
Updated On : 11 Nov 2013, 12:53 pm

ತುರುವೇಕೆರೆ: ಫಿಲಿಪ್ಪೀನ್ಸ್‌ನಲ್ಲಿ ಬೀಸುತ್ತಿರುವ ಹಯಾನ್ ಚಂಡಮಾರುತಕ್ಕೆ ಕನ್ನಡಿಗರೊಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ. ತುರುವೇಕೆರೆ ತಾಲೂಕಿನ ಕೆಜೆಪಿ ಮುಖಂಡ ಮಸಾಲ ಜಯರಾಂ ಅವರು ಮಸಾಲ ವ್ಯವಹಾರದ ನಿಮಿತ್ತ ತಮ್ಮ ಪಾಲುದಾರ ಮಣಿ ಎಂಬುವವರ ಜತೆ ಐದು ದಿನಗಳ ಹಿಂದೆ ಫಿಲಿಪ್ಪೀನ್ಸ್‌ಗೆ ತೆರಳಿದ್ದರು.  ಈಗ ಅವರು ಹಯಾನ್ ಚಂಡಮಾರುತದ ಭೀಕರತೆಯಲ್ಲಿ ಸಿಲುಕಿಕೊಂಡಿದ್ದಾರೆ, ಆತಂಕದಿಂದ ದಿನಗಳನ್ನು ಕಳೆಯುತ್ತಿದ್ದಾರೆ ಎಂದು ಅವರ ಕುಟುಂಬದ ಸದ್ಯರು ತಿಳಿಸಿದ್ದಾರೆ.  ಭಾರತಕ್ಕೆ ಮರಳಲು ಮಸಾಲ ಜಯರಾಮ ಪ್ರಯತ್ನಿಸುತ್ತಿದ್ದಾರೆ. ಆದರೆ, ಇದುವರೆಗೂ ಸಾಧ್ಯವಾಗಿಲ್ಲ. ತಾವಿರುವ 30 ಅಂತಸ್ತಿನ ಹೊಟೇಲ್‌ನ ದೂರವಾಣಿ ಮೂಲಕ ಮನೆಗೆ ಕರೆ ಮಾಡಿದ್ದ ಜಯರಾಂ, 'ಚಂಡಮಾರುತದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ನಿಜ. ಆದರೆ, ಗಾಬರಿಯಾಗಬೇಕಾದ ಅಗತ್ಯವಿಲ್ಲ. ಶೀಘ್ರ ಮರಳುತ್ತೇನೆ' ಎಂದು ತಮ್ಮ ಮಗಳಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement