ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೆಳಗಾವಿಗೆ ಉಗ್ರರ ಕೆಂಗಣ್ಣು

Vishwanath S
Updated On : 19 Nov 2013, 11:57 am

ಕ.ಪ್ರ. ವಾರ್ತೆ, ಬೆಳಗಾವಿ, ನ.18-
ಬೆಳಗಾವಿ ಮೇಲೆ ಉಗ್ರರು ದಾಳಿಗೆ ಸಂಚು ರೂಪಿಸಿದ್ದಾರೆ ಎಂಬ ಬೆಚ್ಚಿ ಬೀಳಿಸುವ ಸ್ಫೋಟಕ ಮಾಹಿತಿಯೊಂದು ರಕ್ಷಣಾ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ಬೆಳಗಾವಿ ನಗರದ ಮೇಲೆ ಉಗ್ರರ ಕೆಂಗಣ್ಣು ಬಿದ್ದಿದ್ದು, ಇಲ್ಲಿನ ಜನತೆಯನ್ನು ಬೆಚ್ಚಿಬೀಳಿಸಿದೆ. ನಗರದ ಮೇಲೆ ಉಗ್ರರು ದಾಳಿಯ ಸಂಚು ರೂಪಿಸಿದ್ದಾರೆ ಎಂದು ಕೇಂದ್ರದ ರಕ್ಷಣಾ ಇಲಾಖೆ ಮಾಹಿತಿ ನೀಡಿರುವುದನ್ನು ಮರಾಠ ಲಘುಪದಾತಿ ದಳದ ಬ್ರಿಗೇಡಿಯರ್ ಸಂತೋಷ ಕುರೂಪ್ 'ಕನ್ನಡಪ್ರಭ'ಕ್ಕೆ ಖಚಿತಪಡಿಸಿದ್ದಾರೆ.
ಸಾರ್ವಜನಿಕರ ಪ್ರವೇಶ ನಿಷೇಧ: ಸುರಕ್ಷತೆಯ ದೃಷ್ಟಿಯಿಂದ ಹಾಗೂ ಸೇನಾ ವಲಯದಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ನಗರದ ಕೋಟೆ ಆವರಣ ಹಾಗೂ ದಂಡು ಮಂಡಳಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೇ, ಸೂಚನಾ ಫಲಕಗಳನ್ನೂ ಹಾಕಲಾಗಿದೆ. ಆದರೆ, ಸೇನಾ ಕಾರ್ಯಕ್ಕೆ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಭದ್ರತೆಯ ಕಾರಣವನ್ನು ಸಂತೋಷ್ ಜನತೆಗೆ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಬೇಹುಗಾರಿಕೆ ಇಲಾಖೆ, ಗೃಹ ಇಲಾಖೆಯವರು ಜಿಲ್ಲಾ ಪೊಲೀಸ್ ಇಲಾಖೆಗೆ ಆಗಾಗ ಸೂಚನೆ, ಎಚ್ಚರಿಕೆ ವಹಿಸುವಂತೆ ಸಂದೇಶಗಳನ್ನು ನೀಡುತ್ತಿರುತ್ತಾರೆ. ಅದರಂತೆ ನಾವೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವಾಭಾವಿಕವಾಗಿಯೇ ನಾವು ಹೆಚ್ಚಿನ ಭದ್ರತೆ, ಬಂದೋಬಸ್ತ್ ಮಾಡಿರುತ್ತೇವೆ.
- ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement