ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎಟಿಎಂ ದರೋಡೆ ಯತ್ನ

Rashmi Kasaragodu
Updated On : 30 Nov 2013, 12:01 pm

ಬೆಂಗಳೂರು: ಎಟಿಎಂ ದೋಚುವ ದುಷ್ಕರ್ಮಿಗಳ ಯತ್ನ ನಗರದಲ್ಲಿ ಮುಂದುವರಿದಿದೆ. ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿ ಕೆ.ನಾರಾಯಣಪುರದಲ್ಲಿರುವ ಎಚ್‌ಡಿಎಫ್‌ಸಿ ಎಟಿಎಂ ಕೇಂದ್ರಕ್ಕೆ ನುಗ್ಗಿದ ದುಷ್ಕಮಿ, ಯಂತ್ರ ಒಡೆದು ಹಣ ದೋಚುವ ಯತ್ನಿಸಿದ್ದಾನೆ.
ನಗರದಲ್ಲಿ ದುಷ್ಕರ್ಮಿಗಳ ದಾಳಿಗೆ ಗುರಿಯಾದ 39ನೇ ಎಟಿಎಂ ಕೇಂದ್ರ ಇದಾಗಿದೆ. ಕೆ.ನಾರಾಯಣಪುರ ವೃತ್ತದ ಬಳಿ ಇರುವ ಎಚ್‌ಡಿಎಫ್‌ಸಿ ಎಟಿಎಂ ಕೇಂದ್ರಕ್ಕೆ ಭದ್ರತಾ ಸಿಬ್ಬಂದಿ ಇರಲಿಲ್ಲ.
ಆಯುಕ್ತರ ಆದೇಶದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಎಟಿಎಂ ಕೇಂದ್ರ ಮುಚ್ಚಿಸಿದ್ದರು. ಇತ್ತ ಬ್ಯಾಂಕ್ ಸಿಬ್ಬಂದಿ ಎಟಿಎಂಗೆ ಬೀಗ ಹಾಕಿದ್ದರು.
ಶುಕ್ರವಾರ ಬೆಳಗಿನಜಾವ 2 - 3 ಗಂಟೆಗೆ ಸುಮಾರಿಗೆ ದುಷ್ಕರ್ಮಿ ಎಟಿಎಂ ಕೇಂದ್ರದ ಬೀಗ ಒಡೆದು ನುಗ್ಗಿ ಶೆಟರ್ ಎಳೆದುಕೊಂಡಿದ್ದಾನೆ.  ಮಂಕಿ ಕ್ಯಾಪ್‌ನಿಂದ ಮುಖ ಮುಚ್ಚಿಕೊಂಡಿದ್ದ ದುಷ್ಕರ್ಮಿ ಸಿಸಿಟಿವಿ ಕ್ಯಾಮೆರಾಕ್ಕೆ  ಬಟ್ಟೆ ಕಟ್ಟಿದ್ದಾನೆ. ಸುತ್ತಿಗೆ ಹಾಗೂ ಇತರ ಬಲವಾದ ಆಯುಧಗಳಿಂದ ಎಟಿಎಂ ಕೇಂದ್ರದ ಮೇಲ್ಭಾಗದ ಪದರ ಒಡೆದಿದ್ದಾನೆ.
ಅಲ್ಲದೇ ಹಣ ಬರುವ ಜಾಗದಲ್ಲಿ ಒಡೆದು ಹಣ ತೆಗೆಯುವ ಭಾರಿ ಪ್ರಯತ್ನ ನಡೆಸಿದ್ದಾನೆ. ಆದರೆ ಹಣ ಇದ್ದ ಡ್ರಾಯರ್ ಭದ್ರವಾಗಿದ್ದ ಕಾರಣ ಸಾಧ್ಯವಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement