ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಧ್ಯಾನಮಾರ್ಗ

Mainashree
Updated On : 30 Nov 2013, 10:11 am

ಹಾರ್ಡ್‌ವರ್ಕ್, ಆತ್ಮ ವಿಶ್ವಾಸ, ಧ್ಯಾನ... ಏಡ್ಸ್  ಒಂದು ರೋಗವೇಅಲ್ಲ ಎಂದು ಕಡೆಗಣಿಸುವ ಮೂರು ಮಾರ್ಗಗಳು.  ನಾನು ಬಳ್ಳಾರಿಯವನು. ನನ್ನ ಹೆಸರು ಪುಟ್ಟಣಪ್ಪ (ಬದಲಿಸಿದ್ದೇನೆ). ಓದಿದ್ದು ಏಳನೇ ತರಗತಿ. ಆಸ್ತಿ, ಪಾಸ್ತಿ ಇಲ್ಲ. 2006ರಲ್ಲಿ ನನಗೆ ಏಡ್ಸ್ ಬಂದ ವಿಚಾರ ತಿಳಿಯಿತು. ನನಗಾಗ 40ನೇ ವರ್ಷ. ನನ್ನ ಬಲವೇ ಉಡುಗಿ ಹೋಗಿತ್ತು. ಆತ್ಮಹತ್ಯೆಯೇ ಉಳಿದ ದಾರಿ ಎಂದೆನ್ನಿಸಿಬಿಟ್ಟಿತು. ಆಗ ನನ್ನ ಕಣ್ಣಿಗೆ ಬಿದ್ದಿದ್ದು ಮುದ್ದಿನ ಮಡದಿ ಹಾಗೂ ನನ್ನಿಬ್ಬರು ಮಕ್ಕಳು. ಹೀಗಾಗಿ ಧೈರ್ಯ ಮಾಡಿ ವಿಷಯವನ್ನು ನನ್ನ ಹೆಂಡತಿಗೆ ತಿಳಿಸಿದೆ. ಆಕೆ ಮೊದಲು ವಿಚಲಿತಳಾದರೂ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಳು. ಧೈರ್ಯ ತುಂಬಿದಳು. ಅದೃಷ್ಟವಶಾತ್ ಆಕೆಗೆ ಏಡ್ಸ್ ಬಂದಿರಲಿಲ್ಲ. ಆದರೆ ಸಮಸ್ಯೆಗಳು ಶುರುವಾಗಿದ್ದೇ ಇಲ್ಲಿಂದ.
ನೆರೆಮನೆಯವರಿಗೆ ವಿಷಯ ತಿಳಿಯಿತು. ಕೀಳಾಗಿ ಮಾತನಾಡಲಾರಂಭಿಸಿದರು. ಮನೆ ಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಹೇಳಿದರು. ಸಹಿಸಿಕೊಂಡೆ, ಮಾದರಿಯಾಗಿ ಬದುಕಬೇಕು, ಇಂದು ದೂರ ಮಾಡಿದವರು ಮುಂದೆ ನನ್ನನ್ನು ಕರೆದು ಮಾತನಾಡಿಸಬೇಕು ಎಂಬಷ್ಟರ ಮಟ್ಟಿಗೆ ಬದುಕುಬೇಕು ಎಂದು ನಿರ್ಧರಿಸಿದೆ. ಅಂದುಕೊಂಡ ರೀತಿಯಲ್ಲಿ ಬೆಳೆದೆ. ಇದಕ್ಕೆ ನನ್ನ ಹೆಂಡತಿ ಜತೆಯಾದಳು. ಟೈಲರಿಂಗ್ ನಡೆಸುತ್ತಿದ್ದ ನಾನು ತರಬೇತಿ ನೀಡಲು ಆರಂಭಿಸಿದೆ. ದಿನವಿಡೀ ಅವಿರತವಾಗಿ ಆತ್ಮವಿಶ್ವಾಸದಿಂದ ಶ್ರಮಿಸಿದೆ. ಇದೀಗ ನನ್ನ ಕೈಕೆಳಗೆ 25 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಹೆಂಡತಿಯೂ ಜತೆಗಿದ್ದು ಸಹಕರಿಸುತ್ತಾಳೆ. ಧ್ಯಾನ ಮಾಡುವುದೂ ಸಹ ಇದಕ್ಕೆ ದಿವ್ಯೌಷಧಿ ಎಂದು ನಾನು ನಂಬಿದ್ದೇನೆ. ಈ ಬಗ್ಗೆ ಬೇರೆಯವರಿಗೂ ಪ್ರತಿ ಶನಿವಾರ ತರಬೇತಿ ನೀಡುತ್ತಿದ್ದೇನೆ.

ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments