ವಿದ್ವಾಂಸ ಚೆನ್ನವೀರ ಗವಾಯಿ ಇನ್ನಿಲ್ಲ
ಗುಲ್ಬರ್ಗ: ಖ್ಯಾತ ಹಿಂದುಸ್ತಾನಿ ಗಾಯಕ, ಹಿರಿಯ ಸಂಗೀತಗಾರ, ಅಫಜಲ್ಪೂರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದ ಚೆನ್ನವೀರ ಗವಾಯಿಗಳು (91) ಶನಿವಾರ ಸಂಜೆ ನಿಧನರಾದರು.
ಹಿಂದೂಸ್ತಾನಿ ಸಂಗೀತದ ಮೂಲಕ ಇವರು ಮನೆಮನೆಯಲ್ಲಿಯೂ ಚಿರಪರಿತರಾಗಿದ್ದರು. ಆಕಾಶವಾಣಿಯ ಸಂಗೀತ ವಿಭಾಗದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದರು. ಅನೇಕ ಸಂಗೀತ ಕಚೇರಿಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಇವರು ಸಂಗೀತಾಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ 4 ಗಂಟೆಗೆ ಗೊಬ್ಬೂರ (ಬಿ) ಗ್ರಾಮದಲ್ಲಿ ನಡೆಯಲಿದೆ ಎಂದು ಗವಾಯಿಗಳ ಅಭಿಮಾನಿಗಳು ತಿಳಿಸಿದ್ದಾರೆ.