ಇಂದಿನಿಂದ ರೈಲು ಪ್ರಯಾಣ ತುಟ್ಟಿ
ರೇಲ್ವೆ ಪ್ರಯಾಣ ಈಗ ಮತ್ತಷ್ಟು ದುಬಾರಿಯಾಗಲಿದೆ. ಎಲ್ಲಾ ದರ್ಜೆಗಳ ಪ್ರಯಾಣ ದರ ಸೋಮವಾರದಿಂದ ಶೇ.2ರಷ್ಟು..
ನವದೆಹಲಿ: ರೇಲ್ವೆ ಪ್ರಯಾಣ ಈಗ ಮತ್ತಷ್ಟು ದುಬಾರಿಯಾಗಲಿದೆ. ಎಲ್ಲಾ ದರ್ಜೆಗಳ ಪ್ರಯಾಣ ದರ ಸೋಮವಾರದಿಂದ ಶೇ.2ರಷ್ಟು ಏರಿಕೆಯಾಗಲಿದೆ. ಡೀಸೆಲ್ ಹಾಗೂ ವಿದ್ಯುತ್ ವೆಚ್ಚದಲ್ಲಿನ ಏರಿಕೆಯಿಂದಾಗಿ ಉಂಟಾಗಿರುವ 1,200 ಕೋಟಿ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ರೇಲ್ವೆ ಇಲಾಖೆ ದರ ಪರಿಷ್ಕರಿಸಿದೆ.
ಆದರೆ, ಉಪನಗರದ ಎರಡನೇ ದರ್ಜೆ ರೈಲು ಪ್ರಯಾಣದ ಮೇಲೆ ಈ ದರ ಏರಿಕೆ ಅನ್ವಯವಾಗುವುದಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.
ರೇಲ್ವೆ ಇಲಾಖೆ ಈ ಹಿಂದೆ ಜ.15ರಂದು ಪ್ರಯಾಣದರ ಏರಿಕೆ ಮಾಡಿತ್ತು. ಇದಾದ ಬಳಿಕ ಈ ರೀತಿ ದರ ಏರಿಕೆ ಮಾಡುತ್ತಿರುವುದು ಇದೇ ಮೊದಲ ಬಾರಿ. ಪರಿಷ್ಕೃತ ದರವು ಅ.7ರ ಪ್ರಯಾಣಕ್ಕಾಗಿ ಮುಂಗಡವಾಗಿ ಬುಕ್ ಮಾಡಿರುವ ಟಿಕೆಟ್‌ಗಳಿಗೂ ಅನ್ವಯಿಸುತ್ತದೆ ಎಂದೂ ಇಲಾಖೆ ಮಾಹಿತಿ ನೀಡಿದೆ.