ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎಚ್‌ಡಿಕೆ, ಶೆಟ್ಟರ್ ಅಧಿಕಾರ ಕಳಕೊಂಡ್ರು

ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬುದು ಮೌಢ್ಯ ಎಂದು ಹೇಳುತ್ತಾ ಬಂದಿದ್ದ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರೇ ತಮ್ಮ ...

Rashmi Kasaragodu
Updated On : 8 Oct 2013, 12:35 pm

ಚಾಮರಾಜನಗರ: ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂಬುದು ಮೌಢ್ಯ ಎಂದು ಹೇಳುತ್ತಾ ಬಂದಿದ್ದ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರೇ ತಮ್ಮ ಭಾಷಣದಲ್ಲಿ ಚಾಮರಾಜನಗರಕ್ಕೆ ಬಂದ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜಗದೀಶ ಶೆಟ್ಟರ್ ಅಧಿಕಾರ ಕಳೆದುಕೊಂಡರು. ಅವರ ಪಕ್ಷ ಅಧಿಕಾರಕ್ಕೆ ಬರಲಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗುವಂತೆ ಮಾಡಿದರು.
ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ  ಚಾಮರಾಜನಗರಕ್ಕೆ ಬರಬೇಡಿ. ನೀವು ಬಂದು ಅಧಿಕಾರ ಕಳೆದುಕೊಂಡರೆ ಚಾಮರಾಜನಗರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಸಲಹೆ ನೀಡಿದ್ದೆ. ಕುಮಾರಸ್ವಾಮಿ ಸಹ ಭೇಟಿ ನೀಡಿ ಅಧಿಕಾರ ಕಳೆದುಕೊಂಡರು. ಅವರ ಪಕ್ಷ ಅಧಿಕಾರಕ್ಕೆ ಬರಲಿಲ್ಲ ಎಂದು ಹೇಳುವ ಮೂಲಕ ತಾವೇ ಹೊಸದೊಂದು ವಿವಾದ ಸೃಷ್ಟಿಸಿದರು. ಇಲ್ಲಿಗೆ ಬಾರದ ಮಾಜಿ ಸಿಎಂ ಯಡಿಯೂರಪ್ಪ ಮಾಡಬಾರದ್ದು ಮಾಡಿ ಜೈಲು ಸೇರಿದರು. ಹೀಗೆ ಚಾಮರಾಜನಗರಕ್ಕೆ ಬಂದವರು, ಬಾರದವರು ಇಬ್ಬರೂ ಅಧಿಕಾರ ಕಳೆದುಕೊಂಡರು ಎಂದರು. ಕಂದಾಯ ಸಚಿವ ವಿ. ಶ್ರೀನಿವಾಸ  ಪ್ರಸಾದ್ ಅವರ ಹೇಳಿಕೆ ಬಗ್ಗೆ  ಪ್ರಸ್ತಾಪ ಮಾಡಿದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಹಾಗೂ ಜಗದೀಶ ಶೆಟ್ಟರ್ ಅವರ ಅಧಿಕಾರ ಅವಧಿ ಮುಗಿದ ಕಾರಣ ಅಧಿಕಾರ ಕಳೆದುಕೊಂಡರು ಎನ್ನುವ ಮೂಲಕ ಗೊಂದಲದ ಹೇಳಿಕೆ ಸರಿ ಮಾಡುವ ಕೆಲಸ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement