ಹಿಂದೂ ವ್ಯಕ್ತಿ ಶವ ತೆಗೆದು ಎಳೆದಾಡಿದರು!
ಇಸ್ಲಾಮಾಬಾದ್: ಮುಸಲ್ಮಾನರ ಸ್ಮಶಾನದಲ್ಲಿ ದಫನ್ ಮಾಡಲಾಗಿದ್ದ ಹಿಂದೂ ವ್ಯಕ್ತಿಯ ಶವವನ್ನು ಹೊರತೆಗೆದು ಬೀದಿಯಲ್ಲಿ ಎಳೆದಾಡಿ ಎಸೆದಿರುವ ಕೃತ್ಯ ಪಾಕ್ನ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ. ಭುರೋ ಭೀಲ್ ಎಂಬ ದಲಿತ ವ್ಯಕ್ತಿ ಶನಿವಾರವಷ್ಟೇ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು. ಇವರನ್ನು ಬದಿನ್ ಜಿಲ್ಲೆಯ ಹಳ್ಳಿಯೊಂದರ ಸ್ಮಶಾನದಲ್ಲಿ ಹೂಳಲಾಗಿತ್ತು. ಆದರೆ ಕೆಲ ಇಸ್ಲಾಂ ಸಂಪ್ರದಾಯವಾದಿಗಳು ಅಂದೇ ಭೀಲ್ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ.