ಮುಂದುವರಿದ ಆಧಾರ್ ಗೊಂದಲ
ಸುಪ್ರೀಂಕೋರ್ಟ್‌ನಿಂದ ಒಪ್ಪಿಗೆ ಸಿಗುವವರೆಗೂ ಆಧಾರ್ ಅನ್ನು ಎಲ್‌ಪಿಜಿ ಸಬ್ಸಿಡಿ ಪಡೆಯಲು ಕಡ್ಡಾಯ ಮಾಡುವುದಿಲ್ಲ ಎಂದು ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ...
ನವದೆಹಲಿ: ಸುಪ್ರೀಂಕೋರ್ಟ್‌ನಿಂದ ಒಪ್ಪಿಗೆ ಸಿಗುವವರೆಗೂ ಆಧಾರ್ ಅನ್ನು ಎಲ್‌ಪಿಜಿ ಸಬ್ಸಿಡಿ ಪಡೆಯಲು ಕಡ್ಡಾಯ ಮಾಡುವುದಿಲ್ಲ ಎಂದು ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮತ್ತೊಂದು ಗೊಂದಲ ಸೃಷ್ಟಿಸಿದ್ದಾರೆ. ತೈಲ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಆಧಾರ್ ಸಂಖ್ಯೆ ಇಲ್ಲದೆ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಅಕೌಂಟ್‌ಗಳಿಗೆ ಹಾಕಲು ಬರುವುದೇ ಇಲ್ಲ. ಸದ್ಯಕ್ಕಂತೂ ಸುಪ್ರೀಂಕೋರ್ಟ್ ನೇರ ವರ್ಗಾವಣೆ ಯೋಜನೆಯನ್ನು ನಿಷೇಧಿಸಿಲ್ಲ. ಅದು ನಿಷೇಧಿಸುವವರೆಗೂ 19 ಜಿಲ್ಲೆಗಳಲ್ಲಿ ನಾವು ಆಧಾರ್ ಅನ್ನೇ ಸಬ್ಸಿಡಿ ನೀಡಲು ಬಳಸಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.