ಅಕಾಡೆಮಿಗಳ ಲೆಕ್ಕಕ್ಕೆ ತನಿಖೆ
ಬೆಂಗಳೂರು: ಭಾಷಾ ಅಕಾಡೆಮಿಗಳಾದ ತುಳು, ಕೊಂಕಣಿ ಮತ್ತು ಬ್ಯಾರಿ ಅಕಾಡೆಮಿಗಳಲ್ಲಿ ಕಾನೂನು ಬಾಹಿರವಾಗಿ ಆಗಿರುವ ಖರ್ಚು-ವೆಚ್ಚ ಕುರಿತು ತನಿಖೆ ನಡೆಸುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಆದೇಶಿಸಿದ್ದಾರೆ. ತುಳು, ಕೊಂಕಣಿ ಮತ್ತು ಬ್ಯಾರಿ ಅಕಾಡೆಮಿಗಳಲ್ಲಿ ಅವ್ಯವಹಾರ, ಹಣವನ್ನು ಸರ್ಕಾರದ ನಿಯಮ ಮೀರಿ ಬಳಕೆ ಮಾಡಿದ ಹಾಗೂ ಟೆಂಡರ್ ನೀಡದೇ ಬೇಕಾದವರಿಗೆ ಗುತ್ತಿಗೆ ನೀಡಿದ ಕುರಿತು 'ಕನ್ನಡಪ್ರಭ' ಅ.10ರಂದು 'ಅಕಾಡೆಮಿಗಳ ಹೆಸರಿಗೆ ಲೆಕ್ಕ: ಆದರಿಲ್ಲ ಪಕ್ಕಾ' ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸಚಿವರು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.