ಬಯೋನಿಕ್ ಮ್ಯಾನ್!
ನ್ಯೂಯಾರ್ಕ್: ನೀವು ತಮಿಳು ಸೂಪರ್ಸ್ಟಾರ್ ರಜನೀಕಾಂತ್ ಅವರ 'ರೋಬೋ' ಸಿನಿಮಾ ನೋಡಿರಬಹುದು. ರೋಬೋಟ್ವೊಂದು ಮಾನವನಂತೇ ವರ್ತಿಸುವುದನ್ನು ನೋಡಿ ಇದು ಸಿನಿಮಾದಲ್ಲಷ್ಟೇ ಸಾಧ್ಯ ಎಂದು ಉದ್ಗರಿಸಿರಬಹುದು.
ನಿಮ್ಮ ಊಹೆ ತಪ್ಪು. ಏಕೆಂದರೆ ನ್ಯೂಯಾರ್ಕ್ನಲ್ಲಿ ಅಂತಹುದೊಂದು ಅದ್ಭುತ ರೋಬೋವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಎಂಜಿನಿಯರ್ಗಳ ತಂಡವೊಂದು ಕೃತಕ ಅಂಗಾಂಗಗಳು, ಕೈಕಾಲುಗಳು ಹಾಗೂ ಇತರೆ ಭಾಗಗಳನ್ನು ಜೋಡಿಸಿ ನೈಜ 'ಜೀವತಾಂತ್ರಿಕ ವ್ಯಕ್ತಿ' (ಬಯೋನಿಕ್ ಮ್ಯಾನ್) ಯೊಬ್ಬನನ್ನು ಸೃಷ್ಟಿಸಿದೆ. ಈ ಮೂಲಕ ವೈದ್ಯಕೀಯ ವಿಜ್ಞಾನವು ಎಷ್ಟೊಂದು ಉನ್ನತ ಮಟ್ಟಕ್ಕೇರಿದೆ ಎಂಬುದನ್ನು ಸಾಬೀತುಪಡಿಸಿದೆ.
ಎಲ್ಲವೂ ಇದೆ: ಈ ರೋಬೋಟ್ ಶೇ.60-70ರಷ್ಟು ಮಾನವನಂತೆಯೇ ಕಾರ್ಯನಿರ್ವಹಿಸುತ್ತದೆ. ಆರೂವರೆ ಅಡಿ ಎತ್ತರದ ಬಯೋನಿಕ್ ಮ್ಯಾನ್ ನಡೆಯುತ್ತದೆ ಹಾಗೂ ಮಾತನಾಡುತ್ತದೆ.