ಮಲಾಲಾ, ಮೂರ್ತಿಗೆ ಬಸವಶ್ರೀ
ಮುರುಘಾಮಠ ಪ್ರತಿವರ್ಷ ನೀಡುವ ಬಸವಶ್ರೀ ಪ್ರಶಸ್ತಿಯನ್ನು 2013ನೇ ಸಾಲಿಗೆ...
ಚಿತ್ರದುರ್ಗ: ಮುರುಘಾಮಠ ಪ್ರತಿವರ್ಷ ನೀಡುವ ಬಸವಶ್ರೀ ಪ್ರಶಸ್ತಿಯನ್ನು 2013ನೇ ಸಾಲಿಗೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ, 2014ನೇ ಸಾಲಿಗೆ ಮಕ್ಕಳ ಹಕ್ಕು ಮತ್ತು ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್‌ಝಾಯ್ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ಎನ್.ಆರ್. ನಾರಾಯಣಮೂರ್ತಿ ಅವರಿಗೆ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಉಪಸ್ಥಿತಿ ಲಭ್ಯವಾಗದ ಕಾರಣ ಬರುವ ಜನವರಿಯಲ್ಲಿ ನೀಡಲು ನಿರ್ಧರಿಸಲಾಗಿದೆ. ತಾಲಿಬಾನಿಗಳ ವಿರುದ್ಧ ಧ್ವನಿ ಎತ್ತಿದ 16 ವರ್ಷದ ಪಾಕಿಸ್ತಾನದ ಸ್ವಾಟ್ ಜಿಲ್ಲೆಯ ಬಾಲಕಿ ಮಲಾಲಾಗೂ ನೀಡಲು ಉದ್ದೇಶಿಸಲಾಗಿದೆ. ಪ್ರಶಸ್ತಿ 5 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ.