ರಾಡಿಯಾ ಟೇಪ್ ಸಿಬಿಐ ತನಿಖೆಗೆ
ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ, ರಾಜಕಾರಣಿಗಳು ಮತ್ತು ಖಾಸಗಿ ವ್ಯಕ್ತಿಗಳ ನಡುವಿನ...
ಪಿಟಿಐ , ನವದೆಹಲಿ , ಅ.17
ಕಾರ್ಪೊರೇಟ್ ಲಾಬಿಗಾರ್ತಿ ನೀರಾ ರಾಡಿಯಾ, ರಾಜಕಾರಣಿಗಳು ಮತ್ತು ಖಾಸಗಿ ವ್ಯಕ್ತಿಗಳ ನಡುವಿನ ದೂರವಾಣಿ ಸಂಭಾಷಣೆಯಲ್ಲಿರುವ 15 ಅಂಶಗಳ ಬಗ್ಗೆ ಸಿಬಿಐನಿಂದ ತನಿಖೆಯಾಗಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಆದೇಶ ನೀಡಿದೆ. ಸಂಭಾಷಣೆ ವೇಳೆ ಅವರು ಭ್ರಷ್ಟಾಚಾರ ಮತ್ತು ಅಕ್ರಮ ನಡೆಸಲು ಮುಂದಾಗಿರುವುದು ಸ್ಪಷ್ಟ. ಮೇಲ್ನೋಟಕ್ಕೆ ಅವರ ನಿರ್ಧಾರ ದುರುದ್ದೇಶದಿಂದ ಕೂಡಿರುವುದು ಗೊತ್ತಾಗುತ್ತಿದೆ ಎಂದು ನ್ಯಾ. ಜಿ.ಎಸ್.ಸಿಂಘ್ವಿ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಎರಡು ತಿಂಗಳ ಒಳಗಾಗಿ ಟೇಪ್ಗಳನ್ನು ಪರಿಶೀಲಿಸಿ ತನಿಖೆ ಮುಕ್ತಾಯಗೊಳಿಸಬೇಕು ಎಂದು ನ್ಯಾಯಾಲಯ ತನಿಖಾ ಸಂಸ್ಥೆಗೆ ಸೂಚಿಸಿದೆ. ಡಿ.16ಕ್ಕೆ ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ನಿಗದಿಪಡಿಸಿದೆ.
ರಾಡಿಯಾ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ 15 ಅಂಶಗಳ ಬಗ್ಗೆ ತನಿಖೆಯಾಗಬೇಕೆಂದು ಹೇಳಿದ್ದರೂ, ಯಾವುದರ ಬಗ್ಗೆ ಎಂದು ನ್ಯಾಯಪೀಠ ಪ್ರತ್ಯೇಕವಾಗಿ ಉಲ್ಲೇಖ ಮಾಡಿಲ್ಲ.
ಆದರೆ ನ್ಯಾಯಾಂಗ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗಳೇ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಕೋರ್ಟ್ ತಿಳಿಸಿದೆ. ಇದೇ ವೇಳೆ ಟೇಪ್ಗಳನ್ನು ಪರಿಶೀಲಿಸುವ ವಿಶೇಷ ತಂಡಕ್ಕೆ ಆದಾಯ ತೆರಿಗೆ ಇಲಾಖೆಯ ಇನ್ನೂ 10 ಸಬ್- ಇನ್ಸ್ಪೆಕ್ಟರ್ಗಳನ್ನು ಸೇರಿಸಿಕೊಳ್ಳುವಂತೆ ಆದೇಶಿಸಿದೆ.