14 ಮಂದಿ ವಿರುದ್ಧ ಆರೋಪ ಪಟ್ಟಿ
ಬೆಂಗಳೂರು: ಮಲ್ಲೇಶ್ವರ ಬಿಜೆಪಿ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ 14 ಆರೋಪಿಗಳ ವಿರುದ್ಧ ನಗರ ಪೊಲೀಸರು ನ್ಯಾಯಾಲಯಕ್ಕೆ ಶನಿವಾರ ಆರೋಪ ಪಟ್ಟಿ ಸಲ್ಲಿಸಿದ್ದಾರೆ. 6 ತಿಂಗಳು ತನಿಖೆ ನಡೆಸಿದ ಬಳಿಕ ಪೊಲೀಸರು ಮೂರು ಆವೃತ್ತಿಗಳಲ್ಲಿ 7445 ಪುಟಗಳನ್ನು ಒಳಗೊಂಡ ಆರೋಪ ಪಟ್ಟಿ ಸಲ್ಲಿಸಿದ್ದಾರೆ. 201 ದಾಖಲೆಗಳು, 260 ಸಾಕ್ಷಿಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ತಮಿಳುನಾಡಿನ ಮಧುರೆ ಮೂಲದ ಬಿಲಾಲ್ ಮಲೀಕ್, ಫಕ್ರುದ್ದೀನ್ ಅಲಿಯಾಸ್ ಪೊಲೀಸ್ ಫಕ್ರುದ್ದೀನ್, ಪನ್ನಾ ಇಸ್ಮಾಯಿಲ್ ಅಲಿಯಾಸ್ ಮಹಮ್ಮದ್ ಇಸ್ಮಾಯಿಲ್ (39) ಸೇರಿ 14 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.