ಗಡಿ ಉದ್ವಿಗ್ನ ತಡೆಗೆ ಶಾಂತಿ ಒಪ್ಪಂದ
ಬೀಜಿಂಗ್: ಗಡಿಯಲ್ಲಿ ಸಂಭವಿಸುವ ಉದ್ವಿಗ್ನ ಸ್ಥಿತಿ ನಿವಾರಿಸುವ ನಿಟ್ಟಿನಲ್ಲಿ ಭಾರತ ಹಾಗೂ ಚೀನಾ ಒಪ್ಪಂದಕ್ಕೆ ಸಹಿ ಹಾಕಿವೆ. ಪ್ರಧಾನಿ ಸಿಂಗ್ ಮತ್ತು ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು 9 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು. ಗಡಿಯಲ್ಲಿ ಪದೇ ಪದೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಮನಗಂಡ ಇಬ್ಬರೂ ನಾಯಕರು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಡಿ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಇದರಂತೆ ಇನ್ನು ಮುಂದೆ ಎರಡು ದೇಶಗಳ ಯೋಧರು ಪರಸ್ಪರ ಶಸ್ತ್ರಾಸ್ತ್ರ ಪ್ರಯೋಗಿಸುವಂತಿಲ್ಲ, ಗಡಿ ಗಸ್ತು ವೇಳೆ ಒಬ್ಬರು ಇನ್ನೊಬ್ಬರ ಕೆಲಸಕ್ಕೆ ಅಡ್ಡಿ ತರುವಂತಿಲ್ಲ. ಸ್ಟ್ಯಾಪ್ಲೆಡ್ ವೀಸಾಗೆ ಸಂಬಂಧಿಸಿದಂತೆ ಪ್ರಧಾನಿ ಸಿಂಗ್ ಚೀನಾ ಪ್ರಧಾನಿ ಜತೆ ಚರ್ಚಿಸಿದರು.