ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪುನೀತ್, ರಮ್ಯಾ ಅತ್ಯುತ್ತಮ ನಟ, ನಟಿ

ಜಾಕಿ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ನಾಯಕ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮತ್ತು ಸಂಜು ವೆಡ್ಸ್ ಗೀತಾ ಚಿತ್ರದಲ್ಲಿನ...

Vishwanath S
Updated On : 25 Oct 2013, 11:56 am

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಅ.25
ಜಾಕಿ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ನಾಯಕ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮತ್ತು ಸಂಜು ವೆಡ್ಸ್ ಗೀತಾ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಾಯಕಿ ಹಾಗೂ ಲೋಕಸಭೆ ಸದಸ್ಯೆ ರಮ್ಯಾ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ.
2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ವಾರ್ತಾ ಸಚಿವ ಸಂತೋಷ್‌ಲಾಡ್  ಶುಕ್ರವಾರ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ  ಹಿರಿಯ ನಿರ್ದೇಶಕ ಭಗವಾನ್ ಅಧ್ಯಕ್ಷತೆಯಲ್ಲಿನ ಸಮಿತಿ ಪಟ್ಟಿ ಅಂತಿಮಗೊಳಿಸಿ ಸಚಿವರಿಗೆ ಸಲ್ಲಿಸಿತು.
ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ನಿರ್ದೇಶಕರಿಗೆ ನೀಡುವ ದಿ.ಪುಟ್ಟಣ್ಣ ಕಣಗಾಲ್ ಪ್ರಶಸ್ತಿಹಿರಿಯ ನಿರ್ದೇಶಕ ಭಾರ್ಗವ ಅವರಿಗೆ, ಚಿತ್ರರಂಗದ ಸಮಗ್ರ ಬೆಳವಣಿಗೆಗೆ ನೀಡುವ ಡಾ.ರಾಜ್‌ಕುಮಾರ್ ಪ್ರಶಸ್ತಿ ಎಸ್.ಶಿವರಾಂಗೆ, ವಿವಿಧ ವಲಯಗಳಲ್ಲಿ ಮಾಡಿದ ಸಾಧನೆಗೆ ನೀಡುವ ಡಾ.ವಿಷ್ಣುವರ್ಧನ್ ಪ್ರಶಸ್ತಿ ಹಿರಿಯ ನಟ, ಸಚಿವ ಅಂಬರೀಷ್‌ಗೆ ನೀಡಲಾಗಿದೆ.   
ಈ ಪ್ರಶಸ್ತಿ ರು. 2ಲಕ್ಷ ನಗದು ಹಾಗೂ ಚಿನ್ನಲೇಪಿತ ಫಲಕವನ್ನು ಒಳಗೊಂಡಿದ್ದು, ನವೆಂಬರ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಾರ್ತಾ ಸಚಿವ ಸಂತೋಷ್ ಲಾಡ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಾಕಿ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಪುನಿತ್ ರಾಜ್‌ಕುಮಾರ್ ಅವರಿಗೆ ಉತ್ತಮ ನಟ ಹಾಗೂ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಟಿ, ಸಂಸದೆ ರವಮ್ಯ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದೆ. ವಿಶೇಷ ತಾಂತ್ರಿಕತೆ, ವೇಷಭೂಷಣ ಮತ್ತು ಇತರೆ ವಿಷಯಗಳಿಗೆ ನೀಡುವ ವಿಶೇಷ ಪ್ರಶಸ್ತಿ ಸೂಪರ್ ಚಿತ್ರದ ಪಾಲಾಗಿದೆ.
ಈ ಹಿಂದೆ ಪ್ರಕಟಿಸಲಾದ ವಿವಾದಾತ್ಮಕ ಪಟ್ಟಿಯಲ್ಲಿ ನೀಡಲಾದ ಮೂರು ಜೀವಮಾನದ ಸಾಧನೆ ಪ್ರಶಸ್ತಿ ಹಾಗೂ ವಿಶೇಷ ಪ್ರಶಸ್ತಿಯನ್ನು ಹೊರತುಪಡಿಸಿ ಉಳಿದೆಲ್ಲ ಪಟ್ಟಿಯನ್ನು ಬದಲಾಯಿಸಲಾಗಿದೆ.

ಉಳಿದ ಪ್ರಶಸ್ತಿಗಳ ವಿವರ
*    ಮೊದಲನೇ ಅತ್ಯುತ್ತಮ ಚಿತ್ರ ಕೆ.ಶಿವರುದ್ರಯ್ಯ ನಿರ್ದೇಶನದ ಮಾಗಿಯ ಕಾಲ, ಎರಡನೇ ಅತ್ಯುತ್ತಮ ಚಿತ್ರ ಅಗ್ನಿ ಶ್ರೀಧರ್ ನಿರ್ದೇಶನದ ತಮಸ್ಸು, ಮೂರನೇ ಅತ್ಯುತ್ತಮ ಚಿತ್ರ ಕೋಡ್ಲು ರಾಮಕೃಷ್ಣ ನಿರ್ದೇಶನದ ಮಾನಸ.
* ವಿಶೇಷ ಸಾಮಾಜಿಕ ಪರಿಸರ ಚಿತ್ರ ಸುವೀರನ್ ನಿರ್ದೇಶನದ ಬ್ಯಾರಿ.
*    ಅತ್ಯುತ್ತಮ ಪ್ರಾದೇಶಿಕ ಚಿತ್ರ ನಾನ್ ಪುಟ್ಟಿನ್ ಮಣ್ ( ಕೊಡವ ಭಾಷೆ ಚಿತ್ರ)
*    ಅತ್ಯುತ್ತಮ ಮಕ್ಕಳ ಚಿತ್ರ ನಿಖಿಲ್ ಮಂಜು ನಿರ್ದೇಶನದ ಒಂದೂರಲ್ಲಿ.
*    ಅತ್ಯುತ್ತಮ ಪೋಷಕ ನಟ ಹೆಜ್ಜೆ ಚಿತ್ರಕ್ಕಾಗಿ ಅಚ್ಯುತ್‌ಕುಮಾರ್. ಅತ್ಯುತ್ತಮ ಪೋಷಕ   ನಟಿ ತಮಸ್ಸು ಚಿತ್ರಕ್ಕಾಗಿ ಹರ್ಷಿಕಾ ಪೂಣಚ್ಚ.
*    ಅತ್ಯುತ್ತಮ ಕಂಠದಾನ ಕಲಾವಿದೆ ಅನುಶ್ರೀ ( ಮುರಳಿ ಮೀಟ್ಸ್ ಮೀರಾ ಚಿತ್ರ )
*    ಅತ್ಯುತ್ತಮ ಕಥೆ ಬರಹಗಾರ ಈಶ್ವರಚಂದ್ರ ( ಮಾಗಿಯ ಕಾಲ )
*    ಅತ್ಯುತ್ತಮ ಚಿತ್ರಕಥೆ ಬರಹಗಾರ ಅಗ್ನಿಶ್ರೀಧರ್ (ತಮಸ್ಸು )
*    ಅತ್ಯುತ್ತಮ ಸಂಭಾಷಣೆಗಾರ ಲಕ್ಷ್ಮಿಪತಿ ಕೋಲಾರ ( ಭಗವತಿ ಕಾಡು )
*    ಅತ್ಯುತ್ತಮ ಸಂಗೀತ ನಿರ್ದೇಶನ ಜಯಶ್ರೀ ಅರವಿಂದ (ಒಂದೂರಲ್ಲಿ )
*    ಅತ್ಯುತ್ತಮ ಧ್ವನಿ ಗ್ರಾಹಕ ಪಳನಿ ಡಿ.ಸೇನಾಪತಿ ( ಕಾಲ್ಗೆಜ್ಜೆ )
*    ಅತ್ಯುತ್ತಮ ಸಂಕಲನಕಾರ ಸುರೇಶ್ ಅರಸ್ (ಐದೊಂದ್ಲ ಐದ )
*    ಅತ್ಯುತ್ತಮ ಬಾಲನಟ ಮಾಸ್ಟರ್ ಚನ್ನಕುಮಾರ್ ( ಒಂದೂರಲ್ಲಿ )
*    ಅತ್ಯುತ್ತಮ ಬಾಲನಟಿ ಬೇಬಿ ಪ್ರಕೃತಿ (ಹೆಜ್ಜೆಗಳು )
*    ಅತ್ಯುತ್ತಮ ಕಲಾ ನಿರ್ದೇಶಕ ಇಸ್ಮಾಯಿಲ್ (ಸಂಜು ವೆಡ್ಸ್ ಗೀತಾ )
*    ಅತ್ಯುತ್ತಮ ಗೀತರಚನಾಕಾರ ಎ.ಬಂಗಾರು (ಕಾಲ್ಗೆಜ್ಜೆ )
*    ಅತ್ಯುತ್ತಮ ಹಿನ್ನೆಲೆ ಗಾಯಕ ರವೀಂದ್ರ ಸೊರಗಾವಿ (ಪುಟ್ಟಕ್ಕನ ಹೈವೆ )
*    ಅತ್ಯುತ್ತಮ ಹಿನ್ನೆಲೆ ಗಾಯಕಿ ರಕ್ಷಾ ಪ್ರಿಯರಾಮ್ ( ಒಂದೂರಲ್ಲಿ )
*    ಡಾ.ಬಾಣಂದೂರು ಕೆಂಪಯ್ಯ, ಆರ್.ಮಂಜುನಾಥ್, ಜಿ.ಎನ್.ಮೋಹನ್, ಅಬ್ದುಲ್ ರೆಹಮಾನ್ ಪಾಷಾ, ಪದ್ಮಾ ಕುಮಟಾ, ರಾಧಾಕೃಷ್ಣ ಪಲ್ಲಕಿ, ಪರಮೇಶ್ವರ, ಗುರುಸ್ವಾಮಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಸುಮಾರು 50 ಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಯನ್ನು ಅಂತಿಮಗೊಳಿಸಿದೆ ಎಂದು ಸಮಿತಿ ಅಧ್ಯಕ್ಷ ಹಿರಿಯ ನಿರ್ದೇಶಕ ಭಗವಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement