ನಮೋ ಸರಾಗ ರಾಗಾ ವಿರಾಗ
ನವದೆಹಲಿ: ಈಗಾಗಲೇ ಒಬ್ಬರು ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದರೆ, ಇನ್ನೊಬ್ಬರು ಅಘೋಷಿತ ಪ್ರಧಾನಿ ಅಭ್ಯರ್ಥಿ. ಏಕಕಾಲಕ್ಕೆ ಇವರಿಬ್ಬರ ರ್ಯಾಲಿ ಕಾಣುವ ಅದೃಷ್ಟ ದೇಶವಾಸಿಗಳದ್ದಾಗಿತ್ತು.
ಇದಷ್ಟೇ ಅಲ್ಲ, ಈ ರ್ಯಾಲಿಗಳಿಗೆ ಜನರಿಂದ ಹೇಗೆ ಪ್ರತಿಕ್ರಿಯೆ ಸಿಗಬಹುದು ಎಂಬ ಕುತೂಹಲವೂ ಇತ್ತು.
ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಪಟನಾದಲ್ಲಿ ನರೇಂದ್ರ ಮೋದಿ ಏಕಕಾಲಕ್ಕೆ ಭಾಷಣ ಶುರುವಿಟ್ಟುಕೊಂಡರು. ಸುದ್ದಿವಾಹಿನಿಗಳು ಮೋದಿ ಮಾತಿಗೆ ಧ್ವನಿ ನೀಡಿ, ರಾಹುಲ್ ಮಾತು ಮ್ಯೂಟ್ ಮಾಡಿಬಿಟ್ಟವು. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಭಾಷಣದ ಹೋಲಿಕೆಯೂ ನಡೆಯಿತು.
ಒಂದು ವೇಳೆ ಕಾಂಗ್ರೆಸ್ ವಂಶಪಾರಂಪರ್ಯ ರಾಜಕೀಯವನ್ನು ಕೈಬಿಟ್ಟರೆ ನಾನು ಖಂಡಿತ ರಾಹುಲ್‌ನನ್ನು ಶೆಹಜಾದೆ ಎಂದು ಕರೆಯುವುದನ್ನು ಬಿಟ್ಟುಬಿಡುತ್ತೇನೆ.
- ನರೇಂದ್ರ ಮೋದಿ
ಕಾಂಗ್ರೆಸ್ ಹೋರಾಟ ಆಕ್ರೋಶದ್ದಲ್ಲ, ಬದಲಾಗಿ ಹೃದಯಾಂತರಾಳದ್ದು. ನಾವು ಬಡವರಿಗಾಗಿ, ದುರ್ಬಲರಿಗಾಗಿ ಹೋರಾಟ ನಡೆಸುತ್ತೇವೆ. ಅವರ ಧ್ವನಿ ಸಂಸತ್ತಲ್ಲಿ ಕೇಳಿಸಬೇಕು.
- ರಾಹುಲ್ ಗಾಂಧಿ
ನರೇಂದ್ರ ಮೋದಿ ಅವರ ಪಟನಾ ರ್ಯಾಲಿಗೆ ಸೇರಿದ್ದ ಜನ ಭೂತಾನ್‌ನ ಜನಸಂಖ್ಯೆಗಿಂತಲೂ ಹೆಚ್ಚು!
- ಅನ್‌ರಿಯಲ್ ಟೈಮ್ಸ್
ರಾಹುಲ್ ಗಾಂಧಿ ಅವರ ರ್ಯಾಲಿಗೆ ಜನರನ್ನು ಕರೆದುಕೊಂಡು ಬರಬೇಕಾದರೆ ಪಟನಾ ರ್ಯಾಲಿಯ ನೇರ ಪ್ರಸಾರ ಮಾಡಬೇಕು.
- ರವಿರಂಜನ್ ಶರ್ಮಾ
ಟೀವಿಯಲ್ಲಿ ಮೋದಿ ಭಾಷಣ ಆಲಿಸಿದ ನನ್ನ ಪಕ್ಕದಲ್ಲಿ ಕೂತಿದ್ದ ವ್ಯಕ್ತಿ ಅವರಿಗೇ ಮತ ಹಾಕುವುದಾಗಿ ಹೇಳಿದ.
- ಕಿರಣ್ ಬೇಡಿ