ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಂಧ್ರ- ಕರ್ನಾಟಕ ಗಡಿ ಸರ್ವೆ ಮಾಡಿ

Rashmi Kasaragodu
Updated On : 29 Oct 2013, 1:17 am

 ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಅಕ್ರಮ ಗಣಿಗಾರಿಕೆಯಿಂದಾಗಿ ಗಡಿ ಬದಲಾವಣೆ ಆಗಿರುವ ಕರ್ನಾಟಕ- ಆಂಧ್ರಪ್ರದೇಶ ಗಡಿ ಭಾಗದಲ್ಲಿ ಸಮೀಕ್ಷೆ ಮಾಡಿ ಗಡಿ ಗುರುತಿಸುವಂತೆ ಸರ್ವೆ ಜನರಲ್ ಆಫ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಸರ್ವೆ ಜನರಲ್ ಆಫ್ ಇಂಡಿಯಾ ಮುಂದಿನ ಆರು ವಾರದೊಳಗೆ ಸಮೀಕ್ಷೆ ಕಾರ್ಯ ಪೂರೈಸಬೇಕು ಎಂದೂ ಸುಪ್ರೀಂ ಕೋರ್ಟ್ ಹಸಿರುಪೀಠ ಸೂಚಿಸಿದೆ. ಗಡಿ ಸಮೀಕ್ಷೆಗೆ ಕರ್ನಾಟಕ-ಆಂಧ್ರ ಉಭಯ ರಾಜ್ಯಗಳು ಸಹಕಾರ ನೀಡಬೇಕು ಎಂದು ನಿರ್ದೇಶನ ನೀಡಿದೆ.
ಅಕ್ರಮ ಗಣಿಗಾರಿಕೆ ನಡೆಸಿದ ಕೆಲವು ಕಂಪನಿಗಳು ಬಳ್ಳಾರಿ ಜಿಲ್ಲೆಗೆ ಹೊಂದಿಕೊಂಡ ಗಡಿ ಭಾಗವನ್ನೆ ಬದಲಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಸಿಇಸಿ ಶಿಫಾರಸಿನಂತೆ ಗಡಿ ಗುರುತಿಸಿದ ನಂತರ ನಾಲ್ಕು ಗಣಿ ಕಂಪನಿಗಳ ಅರ್ಜಿ ವಿಲೇವಾರಿ ಮಾಡುವುದಾಗಿ ಹಸಿರುಪೀಠ ತಿಳಿಸಿತ್ತು. ಉಭಯ ರಾಜ್ಯಗಳ ಸಮನ್ವಯತೆ ಕೊರತೆಯಿಂದಾಗಿ ಗಡಿ ಗುರುತಿಸುವ ಕೆಲಸ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಉಭಯ ರಾಜ್ಯಗಳು ಗಡಿ ಸಮೀಕ್ಷೆಗೆ ಸಹಕಾರ ನೀಡುವಂತೆಯೂ ಸೂಚಿಸಿದೆ.
ಸಮಾಜ ಪರಿವರ್ತನ ಸಮುದಾ ಯದ ಅಧ್ಯಕ್ಷ ಎಸ್.ಆರ್. ಹಿರೇಮಠ  ಅವರು ಅಕ್ರಮ ಗಣಿಗಾರಿಕೆ ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ತನಿಖೆ ನಡೆಸಿದ ಸಿಇಸಿ ಅಕ್ರಮ ಗಣಿಗಾರಿಕೆ ನಡೆಸಿದ ಕಂಪನಿಗಳು ಗಡಿಯನ್ನೇ ಬದಲು ಮಾಡಿರುವುದನ್ನು ಪತ್ತೆ ಹಚ್ಚಿತ್ತು. ಅಲ್ಲದೇ ವಾಸ್ತವಿಕ ಗಡಿ ಗುರುತಿಸುವಂತೆಯೂ ಶಿಫಾರಸು ಮಾಡಿತ್ತು. ಸಿಇಸಿ ಶಿಫಾರಸಿನಂತೆ ಸುಪ್ರೀಂ ಕೋರ್ಟ್ ಗಡಿ ಗುರುತಿಸಲು ಆದೇಶಿಸಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement