ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದೈವ ನಂಬಿಕೆಗೆ ಇಂಬು

Mainashree
Updated On : 29 Oct 2013, 12:09 pm

ಲಂಡನ್: ದೇವರ ಅಸ್ತಿತ್ವಕ್ಕೆ ಸಂಬಂಧಿಸಿದ ಜಿಜ್ಞಾಸೆಗೆ ಮತ್ತೆ ಜೀವ ಬಂದಿದೆ!
ಕಂಪ್ಯೂಟರ್ ವಿಜ್ಞಾನಿಗಳಿಬ್ಬರು ದೇವರ ಅಸ್ತಿತ್ವವನ್ನು ಒಪ್ಪಿಕೊಂಡು ರಚಿಸಲಾಗಿದ್ದ ಗಣಿತದ ಸಮೀಕರಣವೊಂದನ್ನು ಬಿಡಿಸುವಲ್ಲಿ ಇದೀಗ ಯಶಸ್ವಿಯಾಗಿದ್ದಾರೆ. ದೇವರ ಅಸ್ತಿತ್ವದ ಕುರಿತು ಅನೇಕ ಜಿಜ್ಞಾಸೆಗಳು, ಸಿದ್ಧಾಂತಗಳು, ವಾದಗಳು ಹಿಂದಿನಿಂದಲೂ ಮಂಡನೆಯಾಗುತ್ತಲೇ ಇವೆ. ಇಡೀ ವಿಶ್ವವನ್ನು ಮುನ್ನಡೆಸುವ ಶಕ್ತಿಯೊಂದು ವಿಶ್ವದಲ್ಲಿ ಇದ್ದಿರಲೇಬೇಕು ಎಂದು ಬಹುತೇಕ ಮಂದಿ ವಾದಿಸುತ್ತಲೇ ಬಂದಿದ್ದಾರೆ. ಇಂಥದೊಂದು ವಾದ ಇಟ್ಟುಕೊಂಡು ಆಸ್ಟ್ರಿಯಾದ ಗಣಿತಜ್ಞ ಕುರ್ಟ್ ಗಾಡೆಲ್ ಗಣಿತದ ಸಮೀಕರಣವೊಂದನ್ನು ರಚಿಸಿದ್ದರು.
ಇಡೀ ವಿಶ್ವ ಮರೆತುಬಿಟ್ಟಿದ್ದ ಈ ಸಮೀಕರಣವನ್ನು ಈ ವಿಜ್ಞಾನಿಗಳಿಬ್ಬರು ಬಿಡಿಸಿದ್ದಾರೆ.
1978ರಲ್ಲಿ ಗಾಡೆಲ್ ಮೃತಪಟ್ಟಾಗ ಪರಮೋಚ್ಚ ಶಕ್ತಿಯ ಅಸ್ತಿತ್ವದ ಕುರಿತ ಗಣಿತದ ಸಮೀಕರಣಗಳನ್ನು ಬಿಟ್ಟುಹೋಗಿದ್ದರು. ಗಾಡೆಲ್ ಅವರ ಸಮೀಕರಣಗಳ ರುಜುವಾತುಗಳಿಗಾಗಿ ನೀಡಲಾಗಿದ್ದ ಲೆಕ್ಕಾಚಾರದ ವಿವರಗಳು ತೀರಾ ಸಂಕೀರ್ಣವಾಗಿದ್ದವು. ಅವರು ಸಿದ್ಧಾಂತಕ್ಕೆ ನೀಡಿದ ವ್ಯಾಖ್ಯಾನದಲ್ಲಿ  ಪರಮೋಚ್ಚ ಶಕ್ತಿಯೊಂದರ ಅಸ್ತಿತ್ವವನ್ನು ಹೇಳಿಕೊಂಡಿದ್ದರು. ಈ ಗಣಿತದ ಸಮೀಕರಣವನ್ನು ಅನೇಕರು ದೇವರ ಅಸ್ತಿತ್ವವನ್ನು ಹುಡುಕುವ ದಾರಿಯಾಗಿ ಅಧ್ಯಯನ ನಡೆಸಿದ್ದರು.  

ಅಭಿವೃದ್ಧಿಪಡಿಸಿದ್ದ ದೇವರ ಅಸ್ತಿತ್ವದ ಕುರಿತ ಗಣಿತದ ಮಾದರಿ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಸಾಕ್ಷೀಕರಿಸಲು ಸಾಧ್ಯವಿಲ್ಲ. ಆದರೆ, ಲೆಕ್ಕದ ಸಮೀಕರಣದ ಮೂಲಕ ಅದನ್ನು ವ್ಯಕ್ತಪಡಿಸಲು ಸಾಧ್ಯವಿದೆ ಎಂದು ಈ ವಿಜ್ಞಾನಿಗಳು ಹೇಳಿದ್ದಾರೆ.
ಮ್ಯಾಕ್‌ಬುಕ್ ಮೂಲಕ...:ಬರ್ಲಿನ್‌ನ ಫ್ರೀ ಯುನಿವರ್ಸಿಟಿಯ ಕ್ರಿಸ್ಟೋಫ್ ಬೆನ್ಜ್‌ಮುಲ್ಲರ್ ಮತ್ತು ಈತನ ಸಹೋದ್ಯೋಗಿ ವಿಯೆನ್ನಾ ತಾಂತ್ರಿಕ ವಿವಿಯ ಬರ್ನೋ ವೋಲ್ಟ್‌ಝೆನ್‌ಲೊಜೆಲ್ ಪಾಲಿಯೊ ಸೇರಿಕೊಂಡು ಸಾಮಾನ್ಯ ಮ್ಯಾಕ್‌ಬುಕ್ ಬಳಸಿಕೊಂಡು ದೇವರ ಅಸ್ತಿತ್ವದ ಸಿದ್ಧಾಂತವನ್ನು ನಿಜವೆಂದು ಸಾಬೀತುಪಡಿಸಿದ್ದಾರೆ. ಈ ರೀತಿಯ ಸಂಕೀರ್ಣ ಸಿದ್ಧಾಂತಗಳನ್ನು ಅಧಿಕೃತಗೊಳ್ಳುವುದರಿಂದ ಕಂಪ್ಯೂಟರಿಂಗ್ ಕ್ಷೇತ್ರದಲ್ಲಿ ವಿವಿಧ ಸಾಧ್ಯತೆಗಳು ತೆರೆದುಕೊಳ್ಳುತ್ತವೆ ಎನ್ನುತ್ತಾರೆ ಬೆನ್ಜ್‌ಮುಲ್ಲರ್.

ಏನೇನು ಲಾಭ?
ಗಾಡೆಲ್ ಸಿದ್ಧಾಂತದ ಕುರಿತು ವರ್ಷಾರಂಭದಿಂದ ಅಧ್ಯಯನ ನಡೆಸುತ್ತಿರುವ ಈ ವಿಜ್ಞಾನಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಪರೀಕ್ಷೆ ವೇಳೆ ಉಪಯೋಗಕ್ಕೆ ಬರಬಹುದು ಎಂದು ನಂಬಿದ್ದಾರೆ. ಒಟ್ಟಾರೆ ಗಾಡೆಲ್ ಸಿದ್ಧಾಂತವನ್ನು ನಿಜವೆಂದು ಸಾರುವುದರ ಉದ್ದೇಶ ನಿರೀಶ್ವರವಾದಿಗಳ ಮೇಲಿನ ಗೆಲುವೇನೂ ಅಲ್ಲ. ಬದಲಾಗಿ ಗಣಿತಜ್ಞರಿಗೆ ಹೊಸ ಅನ್ವೇಷಣೆಗೆ ಅವಕಾಶ ಮಾಡಿಕೊಡುವ ಒಂದು ಮಾರ್ಗ ಅಷ್ಟೆ!

ಯಾರೀತ ಗಾಡೆಲ್?
ಕರ್ಟ್ ಗಾಡೆಲ್ ಹೆಸರನ್ನು ಬಹುತೇಕರು ಕೇಳಿರಲಿಕ್ಕಿಲ್ಲ. ಅವರಿಗೆ ಆಲ್ಬರ್ಟ್ ಐನ್‌ಸ್ಟೀನ್‌ರಷ್ಟೆ ಗೌರವ ವಿಜ್ಞಾನಿಗಳ ವಲಯದಲ್ಲಿ ಸಿಗುತ್ತದೆ. ಅವರು ಐನ್‌ಸ್ಟೀನ್‌ನ ಆತ್ಮೀಯ ಗೆಳೆಯರೂ ಆಗಿದ್ದರು. 1906ರಲ್ಲಿ ಆಗಿನ ಆಸ್ಟ್ರಿಯ -  ಹಂಗೇರಿಯಾದ ಬ್ರುನೋದಲ್ಲಿ ಹುಟ್ಟಿದ ಗಾಡೆಲ್ ವಿಯೆನ್ನಾದಲ್ಲಿ ಶಿಕ್ಷಣ ಪಡೆದಿದ್ದರು. 1941ರ ವೇಳೆಗೆ ಪರಮೋಚ್ಚ ತಂತ್ರಜ್ಞಾನದ ಅಸ್ತಿತ್ವದ ಕುರಿತು ಅಧ್ಯಯನ ನಡೆಸುತ್ತಿದ್ದರೂ,  1970ರ ವರೆಗೂ ಅದು ಬಹಿರಂಗಗೊಂಡಿರಲಿಲ್ಲ. ಆದರೆ ತಮ್ಮ ಸಾವಿನ ಭಯದಿಂದಾಗಿ ಅವರು ಅದನ್ನು ಸಾರ್ವಜನಿಕಗೊಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement