ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಿಂಡಲಗಾ ಜೈಲಿನಲ್ಲಿ ಕೈದಿಗಳ ಉಪವಾಸ ಸತ್ಯಾಗ್ರಹ

Mainashree
Updated On : 30 Oct 2013, 11:57 am

ಬೆಳಗಾವಿ: ಸನ್ನಡತೆ ಆಧಾರದ ಮೇಲೆ ಹಾಗೂ ಜೀವಾವಧಿ ಶಿಕ್ಷೆಗೊಳಗಾಗಿ ಈಗಾಗಲೇ 14 ವರ್ಷ ಶಿಕ್ಷೆ ಪೂರೈಸಿದ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಮುಂಜಾನೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ 600ಕ್ಕೂ ಹೆಚ್ಚು ಕೈದಿಗಳು ಸಚಿವ ಸತೀಶ ಜಾರಕಿಹೊಳಿ ಭರವಸೆ ಮೇರೆಗೆ ಸಂಜೆ ವೇಳೆಗೆ ಉಪವಾಸ ಕೈ ಬಿಟ್ಟಿದ್ದಾರೆ.
ಮುಂಜಾನೆ ಉಪಾಹಾರ ತಿರಸ್ಕರಿಸಿದ ಕೈದಿಗಳು ಮಧ್ಯಾಹ್ನದ ಭೋಜನವನ್ನೂ ಸ್ವೀಕರಿಸಲಿಲ್ಲ. ಅದಲ್ಲದೇ ಕೇಂದ್ರ ಕಾರಾಗೃಹದಲ್ಲಿ ಯಾವುದೇ ರೀತಿಯ ಕಾರ್ಯ ಚಟುವಟಿಕೆಯಲ್ಲೂ ಪಾಲ್ಗೊಳ್ಳದೆ ಕುಳಿತಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಿಲ್ಲ. ಜೀವಾವಧಿ ಶಿಕ್ಷೆಯ ವ್ಯಾಖ್ಯಾನವನ್ನು ಬದಲಾಯಿಸಿರುವ ಹಿನ್ನೆಲೆಯಲ್ಲಿ 14 ವರ್ಷ ಶಿಕ್ಷೆ ಪೂರೈಸಿದ ಕೈದಿಗಳಿಗೂ ಬಂಧಮುಕ್ತ ಭಾಗ್ಯವಿಲ್ಲ. ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಇಂಥ ಸುಮಾರು 150 ಕೈದಿಗಳಿದ್ದಾರೆ. ನ.1ರಂದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಾದರೂ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ನಿಮ್ಮ ಅಹವಾಲುಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಕ್ಷಣ ಉಪವಾಸ ನಿಲ್ಲಿಸಿ ಉಪಹಾರ, ಊಟ ಸೇವಿಸಿ. ದಿನನಿತ್ಯದ ಕಾರ್ಯ ಚಟುವಟಿಕೆ (ಜೈಲಿನಲ್ಲಿ ಕೈಗೊಳ್ಳುವ ಕೆಲಸ ಕಾರ್ಯ)ಯಲ್ಲಿ ಪಾಲ್ಗೊಳ್ಳಿ ಎಂದು ಜೈಲಿನ ಅಧಿಕಾರಿಗಳು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸಂಜೆ 5 ಗಂಟೆ ಸುಮಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತುಕತೆ ನಡೆಸಿ ಮನವೊಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement