ಚಿಕ್ಕಮಗಳೂರು ಮಹಿಳೆ ಸಾವು
ಚಿಕ್ಕಮಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಅತ್ತಿಗೆಯನ್ನು ನೋಡಲು ತೆರಳುತ್ತಿದ್ದ ಚಿಕ್ಕಮಗಳೂರಿನ ಮಹಿಳೆಯೊಬ್ಬರು ಬಸ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಮೈಥಿಲಿ (60) ಮೃತಪಟ್ಟವರು. ಇವು ಜಿಪಂ ಸಭಾ ಶಾಖೆಯಲ್ಲಿ ಸ್ಟೆನೋಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಜೂನ್ನಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದರು. ಅವರು ತಮ್ಮ ಸಹೋದರನ ಮಗನೊಂದಿಗೆ ಇಲ್ಲಿನ ಹೌಸಿಂಗ್ ಬೋರ್ಡ್ನಲ್ಲಿ ವಾಸವಾಗಿದ್ದರು. ಹೈದರಾಬಾದ್ನಲ್ಲಿರುವ ತಮ್ಮ ಅತ್ತಿಗೆ ಅಲಮೇಲು ವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಕಾಣಲು ಮೈಥಿಲಿ ಹಾಗೂ ಬೆಂಗಳೂರಿನಲ್ಲಿ ವಾಸವಾಗಿದ್ದ ಅವರ ಸಂಬಂಧಿಕರಾದ ನಾದಿನಿ ವಾಸಂತಿ ಹಾಗೂ ಅವರ ಗಂಡ ಗಿರಿಧರ್ನೊಂದಿಗೆ ಹೈದರಾಬಾದ್ಗೆ ತೆರಳುತ್ತಿದ್ದರು. ಈ ಮೂವರೂ ಬೆಂಕಿಗೆ ಆಹುತಿಯಾಗಿದ್ದಾರೆ. ಬಸ್ ದುರಂತ ನಡೆದ ವಿಷಯ ತಿಳಿಯುತ್ತಿದ್ದಂತೆ ಮೈಥಿಲಿ ಅವರ ಸಹೋದರ ಸೇತುರಾಂ ಅವರು ಘಟನಾ ಸ್ಥಳಕ್ಕೆ ತೆರಳಿದ್ದಾರೆ.