ದುರ್ಗದ ಟೆಕಿ ಸಾವು
ಚಿತ್ರದುರ್ಗ: ಬಸ್ ದುರಂತದಲ್ಲಿ ಚಿತ್ರದುರ್ಗದ ಎಂಜಿನಿಯರ್ ಶ್ರೀಕೃಷ್ಣ ಮೃತಪಟ್ಟಿದ್ದಾರೆ. ನಗರದ ಜೆ.ಸಿ.ಆರ್. ಬಡಾವಣೆಯ ಪಿವಿಎಸ್ ಆಸ್ಪತ್ರೆ ಬಳಿಯ ನಿವಾಸಿ ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ನಾಗಪ್ಪ ಎಂಬುವರ ಪುತ್ರ ಶ್ರೀಕೃಷ್ಣ ಹೈದರಾಬಾದ್ನಲ್ಲಿ ಕೆಲಸದಲ್ಲಿದ್ದರು. ದಸರಾಕ್ಕೆ ಆಗಮಿಸಿದ್ದ ಅವರು ಹಬ್ಬದ ನಂತರ ಬೆಂಗಳೂರಿಗೆ ತೆರಳಿ, ಅಲ್ಲಿಂದ ಮಂಗಳವಾರ ರಾತ್ರಿ ಹೈದರಾಬಾದ್ಗೆ ಹೊರಟಿದ್ದರು. ಪತ್ನಿ ರಶ್ಮಿ, 2 ವರ್ಷದ ಮಗಳು ಇದ್ದಾರೆ.