ಗಡಿಯಲ್ಲಿ ತಮಿಳುನಾಡು ಪೊಲೀಸರಿಂದ ಗಸ್ತು
ಬೆಂಗಳೂರು: ಸೈಕೋ ಜೈಶಂಕರ್ ಪತ್ತೆಗೆ ತಮಿಳುನಾಡು ಪೊಲೀಸರು ಕೂಡ ಕರ್ನಾಟಕ-ತಮಿಳುನಾಡು ಗಡಿ ಪ್ರದೇಶದಲ್ಲಿ ಗಸ್ತು ತೀವ್ರಗೊಳಿಸಿದ್ದು, ಎಲ್ಲ ವಾಹನಗಳನ್ನು ವ್ಯಾಪಕ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆ ನಡೆಸುತ್ತಿರುವ ಅವರು ಪ್ರಯಾಣಿಕರ ಪರಿಶೀಲನೆ ನಡೆಸಿ, ವಾಹನದಲ್ಲಿ ಜೈ ಶಂಕರ್ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕವೇ ಮುಂದೆ ಸಾಗಲು ಬಿಡುತ್ತಿದ್ದಾರೆ. ಅಲ್ಲದೆ, ಜೈ ಶಂಕರ್ನ ವಿವಿಧ ಆಯಾಮಗಳ ಭಾವಚಿತ್ರಗಳ ಜತೆಗೆ ಪೊಲೀಸರ ಸಂಪರ್ಕ ಸಂಖ್ಯೆಗಳನ್ನು ಒಳಗೊಂಡ ಬ್ಯಾನರ್, ಭಿತ್ತಿಪತ್ರಗಳನ್ನು ಕೂಡ ತಪಾಸಣಾ ಕೇಂದ್ರ ಸೇರಿದಂತೆ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಮುಂತಾದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ಹೊಸೂರು ಡಿಎಸ್ಪಿ ಜಿ.ಗೋಪಿ ತಿಳಿಸಿದ್ದಾರೆ.