ಮೋದಿ ಬೈಯ್ದು ವಂಝಾರ ನಿವೃತ್ತಿ
ಅಹಮದಾಬಾದ್: ನಕಲಿ ಎನ್ಕೌಂಟರ್ ಪ್ರಕರಣಗಳಿಗಾಗಿ 2007ರಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಗುಜರಾತ್ನ ವಿವಾದಾತ್ಮಕ ಹಿರಿಯ ಪೊಲೀಸ್ ಅಧಿಕಾರಿ ಡಿ.ಜಿ. ವಂಝಾರ ಐಪಿಎಸ್ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಈ ವೇಳೆ ಗುಜರಾತ್ ಸಿಎಂ ನರೇಂದ್ರ ಮೋದಿ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿರುವ ಅವರು, ನಕಲಿ ಎನ್ಕೌಂಟರ್ಗಳು ಗೃಹ ಸಚಿವ ಅಮಿತ್ ಶಾ ಅಣತಿಯಂತೆ ನಡೆಯುತ್ತಿತ್ತು ಎಂದು ದೂರಿದ್ದಾರೆ.
ಸಬರ್ಮತಿ ಜೈಲಿನಿಂದಲೇ ರಾಜ್ಯ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದಿರುವ 10 ಪುಟಗಳ ಪತ್ರದಲ್ಲಿ ಅವರು ಈ ಆರೋಪ ಮಾಡಿದ್ದಾರೆ. ನಾನು ಮೋದಿ ಅವರನ್ನು ದೇವರಂತೆ ಭಾವಿಸುತ್ತಿದ್ದೆ. ಆದರೆ, ಅವರು ಅಮಿತ್ಶಾ ಅವರ ದುಷ್ಟ ಪ್ರಭಾವದಿಂದ ಹೊರಬರಲೇ ಇಲ್ಲ ಎಂದು ದೂರಿದ್ದಾರೆ.
ಸಬರ್ಮತಿ ಜೈಲಿನಿಂದಲೇ ರಾಜ್ಯ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದಿರುವ 10 ಪುಟಗಳ ಪತ್ರದಲ್ಲಿ ಈ ಆರೋಪ ಮಾಡಿದ್ದಾರೆ.
ನಾನು ಮೋದಿ ಅವರನ್ನು ದೇವರಂತೆ ಭಾವಿಸುತ್ತಿದ್ದೆ. ಅವರು ಅಮಿತ್‌ಶಾರ ದುಷ್ಟ ಪ್ರಭಾವದಿಂದ ಹೊರಬರಲೇ ಇಲ್ಲ. ಪಾಕ್ ಪ್ರೇರಿತ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ ವಂಝಾರ.