ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಿರಿಯಾ ಯುದ್ಧಕ್ಕೆ ಕ್ಷಣಗಣನೆ

ಸಿರಿಯಾ ಮೇಲೆ ದಾಳಿಗಾಗಿ ಕಾಯುತ್ತಿರುವ ಅಮೆರಿಕ ಪಾಲಿಗೆ ಇದೀಗ ಶುಭವಾರ್ತೆ. ಸೆನೆಟ್‌ನ ವಿದೇಶಾಂಗ ವ್ಯವಹಾರಗಳ ಸಮಿತಿ ಕರಡು ನಿರ್ಣಯಕ್ಕೆ ಒಪ್ಪಿಗೆ...

Mainashree
Updated On : 4 Sept 2013, 10:54 am

ವಾಷಿಂಗ್ಟನ್: ಸಿರಿಯಾ ಮೇಲೆ ದಾಳಿಗಾಗಿ ಕಾಯುತ್ತಿರುವ ಅಮೆರಿಕ ಪಾಲಿಗೆ ಇದೀಗ ಶುಭವಾರ್ತೆ. ಸೆನೆಟ್‌ನ ವಿದೇಶಾಂಗ ವ್ಯವಹಾರಗಳ ಸಮಿತಿ ಕರಡು ನಿರ್ಣಯಕ್ಕೆ ಒಪ್ಪಿಗೆ ನೀಡಿದ್ದು, 60 ದಿನಗಳ ಮಿತಿಯಲ್ಲಿ ದಾಳಿ ನಡೆಸಿಕೊಂಡು ಬನ್ನಿ ಎಂದು ಹೇಳಿದೆ. ಜೊತೆಗೆ ಸಿರಿಯಾ ನೆಲಕ್ಕೆ ಕಾಲಿಡದೇ, ಕೇವಲ ವೈಮಾನಿಕ ದಾಳಿ ನಡೆಸಬೇಕು ಎಂದೂ ಅದು ಷರತ್ತು ವಿಧಿಸಿದೆ.
ಈ ಸಂಬಂಧ ಬುಧವಾರ ರಾತ್ರಿ ಸೆನೆಟ್‌ನಲ್ಲಿ ನಿರ್ಣಯ ಮಂಡನೆಯಾಗಲಿದ್ದು, ಅದಕ್ಕೆ ಒಪ್ಪಿಗೆ ಸಿಕ್ಕರೆ ಅಮೆರಿಕ ಯಾವಾಗ ಬೇಕಾದರೂ ದಾಳಿ ನಡೆಸಬಹುದಾಗಿದೆ.  ಇದೇ ವೇಳೆ ಗುರುವಾರದಿಂದ ಆರಂಭವಾಗಲಿರುವ ಜಿ20 ಶೃಂಗಸಭೆ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮಾತುಕತೆ ನಡೆಸಲಿದ್ದಾರೆ. ಎರಡು ದೇಶಗಳ ನಡುವೆ ಉಂಟಾಗಿರುವ ವೈಮನಸ್ಸಿಗೆ ಅಂತಿಮ ಹಾಡಲಿದ್ದಾರೆ ಎಂದೇ ಹೇಳಲಾಗುತ್ತಿದೆ.
ಈ ಮಧ್ಯೆ ಸಿರಿಯಾ ಮೇಲೆ ಯಾವುದೇ ಮಿಲಿಟರಿ ದಾಳಿ ಕೂಡದು ಎಂದು ವಿಶ್ವಸಂಸ್ಥೆ ಹೇಳಿದೆ. ಭದ್ರತಾ ಮಂಡಳಿ ಒಪ್ಪಿಗೆ ಪಡದೇ ದಾಳಿ ನಡೆಸಬೇಕು ಎಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement