ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದಸರಾ ಆನೆಗಳಿಗೆ ಮರಳುಮೂಟೆ ಕಟ್ಟಿ ತಾಲೀಮು

Mainashree
Updated On : 6 Sept 2013, 10:51 am

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಅರ್ಜುನ ನೇತೃತ್ವದ ಆನೆಗಳ ತಂಡಕ್ಕೆ ಶುಕ್ರವಾರ ತಾಲೀಮು ನೀಡಲಾಯಿತು.
750 ಕೆ.ಜಿ. ತೂಕದ ಅಂಬಾರಿ ಹೊರಬೇಕಾದ ಜವಾಬ್ದಾರಿ ಹೊತ್ತಿರುವ ಅರ್ಜುನನಿಗೆ ಶುಕ್ರವಾರ ಮೊದಲ ಬಾರಿಗೆ 250 ಕೆ.ಜಿ. ತೂಕದ ಮರಳು ಮೂಟೆಯನ್ನಿಟ್ಟು ರಾಜ ಗಾಂಭೀರ್ಯ ನಡಿಗೆಯ ತಾಲೀಮು ನೀಡಲಾಯಿತು. 50 ರಿಂದ 60 ಕೆ.ಜಿ. ತೂಕದ ಐದು ಮರಳು ತುಂಬಿದ ಚೀಲವನ್ನು ಆನೆಯ ಬೆನ್ನಿನ ಮೇಲಿರಿಸಿದ್ದ ತೊಟ್ಟಿಲಿನಲ್ಲಿಟ್ಟು ತಾಲೀಮು ನೀಡಲಾಯಿತು. ಅರಮನೆಯಿಂದ ಬನ್ನಿಮಂಟಪದವರೆಗೆ ಸರಾಗವಾಗಿ ಆನೆಯೂ ಮರಳು ಮೂಟೆಯನ್ನು ಹೊತ್ತಿತು.
ಅಲ್ಲದೆ ಸಂಜೆ ವೇಳೆ ಮರಳುಮೂಟೆರಹಿತವಾಗಿ ಆನೆಯನ್ನು ಬನ್ನಿಮಂಟಪದವರೆಗೆ ನಡೆಸಲಾಯಿತು. ಇಂದು ಅರ್ಜುನನಿಗೆ ಈ ತಾಲೀಮು ನೀಡಲಾಗಿದ್ದು, ನಾಳೆ ಅಭಿಮನ್ಯುವಿಗೆ, ಬಳಿಕ ಗಜೇಂದ್ರನಿಗೆ, ಬಲರಾಮನಿಗೆ ತಾಲೀಮು ನೀಡಲಾಗುವುದು ಎಂದು ಆನೆಯ ವೈದ್ಯ ಡಾ.ನಾಗರಾಜು ತಿಳಿಸಿದ್ದಾರೆ.
ದಿನಗಳೆದಂತೆ ಮರಳು ಮೂಟೆಯ ತೂಕ ಹೆಚ್ಚುವುದಲ್ಲದೆ, ಮರದ ಅಂಬಾರಿಯನ್ನಿಟ್ಟು ತಾಲೀಮು ನೀಡಲಾಗುತ್ತದೆ. ಅಲ್ಲದೆ ಎಂದಿನಂತೆ ಆನೆಗಳಿಗೆ ಹುರುಳಿ, ಹೆಸರು ಕಾಳು, ಕಡಲೆ, ಹುಲ್ಲು, ಬೆಲ್ಲ ಮತ್ತು ಆಲದ ಎಲೆಯನ್ನು ಆಹಾರವಾಗಿ ನೀಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement