ಸಚಿವರಿಗೆ ಮಜಾ, ಸಾಮಾನ್ಯರಿಗೆ ಸಜಾ
ಚಿನ್ನದ ಆಮದಿಗೆ ಕಡಿವಾಣ ಹೇರುವುದರಿಂದ ಇಂಧನದ ಬಳಕೆ ಕಡಿಮೆ ಮಾಡುವವರೆಗೆ ಕೇಂದ್ರ ಸರ್ಕಾರವು ಜನಸಾಮಾನ್ಯರ ಮೇಲೆ ಮಿತವ್ಯಯ ಕ್ರಮದ...
ನವದೆಹಲಿ: ಚಿನ್ನದ ಆಮದಿಗೆ ಕಡಿವಾಣ ಹೇರುವುದರಿಂದ ಇಂಧನದ ಬಳಕೆ ಕಡಿಮೆ ಮಾಡುವವರೆಗೆ ಕೇಂದ್ರ ಸರ್ಕಾರವು ಜನಸಾಮಾನ್ಯರ ಮೇಲೆ ಮಿತವ್ಯಯ ಕ್ರಮದ ಹೊರೆಯನ್ನು ಹೊರಿಸುತ್ತಿದೆ. ಆದರೆ, ಸರ್ಕಾರ ಮಾತ್ರ ಅದನ್ನು ಅನುಸರಿಸುತ್ತಿಲ್ಲ. ಉನ್ನತ ಸ್ಥಾನದಲ್ಲಿ ಕುಳಿತಿರುವ ಜನಪ್ರತಿನಿಧಿಗಳು ನೀರಿನಂತೆ ಹಣವನ್ನು ಖರ್ಚು ಮಾಡುತ್ತಿದ್ದಾರೆ.
ಕಳೆದ 3 ವರ್ಷಗಳಲ್ಲಿ ಕೇಂದ್ರ ಸಚಿವರ 77 ಬಂಗಲೆಗಳ ನಿರ್ವಹಣೆಗೆ 100 ಕೋಟಿ ವೆಚ್ಚ ಮಾಡಿರುವುದೇ ಇದಕ್ಕೆ ಉದಾಹರಣೆ. ಸಚಿವರ ಬಾಡಿಗೆ ರಹಿತ ಮನೆಗಳಿಗೆ ಪೈಂಟ್ ಹಚ್ಚಲು, ಉದ್ಯಾನ ಸ್ವಚ್ಛಗೊಳಿಸಲು, ಎಸಿ ಅಳವಡಿಕೆ ಮುಂತಾದ ಕೆಲಸಗಳಿಗಾಗಿಯೇ ಇಷ್ಟೊಂದು ವೆಚ್ಚ ಮಾಡಲಾಗಿದೆ. ಈ ಅವಧಿಯಲ್ಲಿ ಸರ್ಕಾರ ತನ್ನ ಖರ್ಚನ್ನು ಶೇ.10ರಷ್ಟು ಕಡಿಮೆ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಆದರೆ, ಬಜೆಟ್ ದಾಖಲೆಗಳು ಹೇಳುವಂತೆ, ಕಳೆದ 11 ವರ್ಷಗಳಲ್ಲಿ ಸರ್ಕಾರಿ ಅಧಿಕಾರಿಗಳ ಪ್ರವಾಸ ಭತ್ಯೆಯು 3 ಪಟ್ಟು ಅಧಿಕವಾಗಿದೆ.