ರಾಜಸ್ಥಾನ ದರ್ಶನಕ್ಕೆ ವಿಶೇಷ ಪ್ರವಾಸ ರೈಲು
ಮೈಸೂರು: ರಾಜಸ್ಥಾನದ ಪ್ರವಾಸಿ ತಾಣಗಳನ್ನು ಪರಿಚಯಿಸಿ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಇಂಡಿಯನ್ ರೇಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ ಲಿ. ರಾಜಸ್ಥಾನ ವಿಶೇಷ ಪ್ರವಾಸ ರೈಲನ್ನು ಓಡಾಟಕ್ಕೆ ಬಿಟ್ಟಿದ್ದು, ವಿಶೇಷ ಪ್ಯಾಕೇಜ್ ಕೊಡುಗೆ ನೀಡಿದೆ.
ನವರಾತ್ರಿಯ ರಜಾದಿನಗಳಲ್ಲಿ ಈ ರೈಲು ರಾಜಸ್ಥಾನ ಮತ್ತು ಚೆನ್ನೈ ನಡುವೆ ಸಂಚರಿಸಲಿದ್ದು, ಬೆಂಗಳೂರು- ಮೈಸೂರು, ಹಾಸನ- ಹುಬ್ಬಳ್ಳಿ- ಕಾಚಿಗುಡ ಮಾರ್ಗದ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಒಟ್ಟು 752 ಮಂದಿಗೆ ಸೀಟು ಕಲ್ಪಿಸಲಾಗಿದ್ದು, ರಾಜಸ್ಥಾನದ ಉದಯಪುರ್, ಚಿತ್ತೂರುಗಢ, ಜೈಪುರ್, ಜೈಸಲ್ಮಾರ್, ಜೋಧಪುರ್, ಮೌಂಟ್ಅಬುಗೆ ಭೇಟಿ ನೀಡಬಹುದಾಗಿದೆ. ಈ ರೈಲು ಅ.8 ರಂದು ಚೆನ್ನೈನಿಂದ ಹೊರಟು ಅ. 9ಕ್ಕೆ ಬೆಂಗಳೂರು ಜಂಕ್ಷನ್ಗೆ ಆಗಮಿಸಲಿದೆ. ನಂತರ ರಾಜಸ್ಥಾನಕ್ಕೆ ತೆರಳಿ ಪುನಃ ಚೆನ್ನೈಗೆ ಅ.20ಕ್ಕೆ ವಾಪಸಾಗಲಿದೆ. ಒಟ್ಟು 12 ದಿನಗಳ ಪ್ಯಾಕೇಜ್ ಟೂರ್ ಇದಾಗಿದ್ದು, ಜನರಿಗೆ ಅನುಕೂಲವಾಗುವಂತೆ ಡಿಲಕ್ಸ್ (32,550), ಕಂಫರ್ಟ್ (27,950), ಸ್ಟ್ಯಾಂಡರ್ಡ್ (21,370) ಹಾಗೂ ಬಜೆಟ್ (19,050) ಎಂಬ ಪ್ಯಾಕೇಜ್ ನೀಡಲಾಗಿದೆ. ಆಸಕ್ತರು ದೂ. 0821- 2426001 ಸಂಪರ್ಕಿಸಬಹುದು.