ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎರಡು ತಿಂಗಳ ಹಸುಗೂಸು ಅಪಹರಣ

Mainashree
Updated On : 14 Sept 2013, 10:04 am

ಬಿಜಾಪುರ: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 2 ತಿಂಗಳ ಹಸುಗೂಸನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.
ಇಂದಿರಾ ನಗರ ಬಡಾವಣೆಯ ಸಾದಿಕ್ ದಂಪತಿಯ ಗಂಡು ಮಗು ಇಬ್ರಾಹಿಂ ಅಪಹರಣಕ್ಕೀಡಾದ ಮಗು. ಇಬ್ರಾಹಿಂ ಹಾಗೂ ಫಾತಿಮಾ ಅವಳಿ ಜವಳಿ ಮಕ್ಕಳು. ಮೂರ್ಛೆ ರೋಗದಿಂದ ಬಳಲುತ್ತಿದ್ದ ಇಬ್ರಾಹಿಂನನ್ನು ಶುಕ್ರವಾರ ಬೆಳಗ್ಗೆ ನಗರದ ಅಲ್-ಅಮೀನ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 2 ಗಂಟೆವರೆಗೆ ಇಬ್ರಾಹಿಂನ ತಂದೆ ಸಾದಿಕ್ ಹಾಗೂ ತಾಯಿ ನಫೀಜಾ ಎಚ್ಚರವಾಗಿದ್ದರು. ನಂತರ ನಿದ್ರಿಗೆ ಜಾರಿದ್ದರು. ಆದರೆ, ಸುಮಾರು 2.30ರವೇಳೆಗೆ ಎಚ್ಚರಗೊಂಡಾಗ ಮಗು ಹಾಸಿಗೆಯಲ್ಲಿ ಇರಲಿಲ್ಲ. ಆಸ್ಪತ್ರೆ ತುಂಬಾ ಹುಡುಕಾಡಿದರೂ ಪತ್ತೆಯಾಗಿಲ್ಲ. ಸುದ್ದಿ ತಿಳಿದ ಸಾದಿಕ್ ಸಂಬಂಧಿಕರು ಬೆಳಗ್ಗೆ ಅಧಿಕ ಸಂಖ್ಯೆಯಲ್ಲಿ ಆಸ್ಪತ್ರೆಗೆ ಧಾವಿಸಿದರು. ಮಗು ಕಾಣೆಯಾಗಿರುವುದಕ್ಕೆ ಆಸ್ಪತ್ರೆಯೇ ಹೊಣೆ ಹೊರಬೇಕೆಂದು ಎಂದು ವೈದ್ಯರು, ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement