ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಹಿಳೆಯರ ಆತ್ಮರಕ್ಷಣೆಗೆ ಉಂಗುರ!

Mainashree
Updated On : 14 Sept 2013, 10:26 am

ಬೆಂಗಳೂರು: ಇದು ಮಹಿಳೆಯರ ಕೈ ಬೆರಳಿಗೆ ಅಲಂಕಾರಿಕ ಉಂಗುರವೂ ಹೌದು. ದೌರ್ಜನ್ಯ ನಡೆದರೆ ಆಕೆಯನ್ನು ರಕ್ಷಿಸುವ ಸಾಧನವೂ ಹೌದು!
ಅಂತಹ ಉಂಗುರ ಸೋಮವಾರದಿಂದ ಮಾರುಕಟ್ಟೆಯಲ್ಲಿ ಲಭ್ಯ. ಆಧುನಿಕ ಜಗತ್ತಿನಲ್ಲಿ ಮಹಿಳೆಯರ ರಕ್ಷಣೆಗೆ ವಿವಿಧ ಸಾಧನಗಳು ಬಂದಿದ್ದು, ಇದು ಆಧುನಿಕ ಸಾಧನವಾಗಿದೆ.
ಆ ಉಂಗುರ ತೊಟ್ಟವರು ಎದುರಾಳಿಯಿಂದ ಪಾರಾಗಬಹುದು. ಆಕೆ ಮೇಲೆ ನಡೆಯುವ ಅತ್ಯಾಚಾರ, ಹಲ್ಲೆ, ದರೋಡೆಯಂತಹ ಪ್ರಕರಣಗಳಿಂದ ತಪ್ಪಿಸಿಕೊಳ್ಳಬಹುದು.
ಇಂತಹದೊಂದು ಉಂಗುರವನ್ನು 'ಸೇವ್ ಮೈ ಸಿಸ್ಟರ್ಸ್‌'(ನಮ್ಮ ಸಹೋದರಿಯನ್ನು ರಕ್ಷಿಸಿ) ಎಂಬ ಸಂಸ್ಥೆ ಹೊರತಂದಿದೆ. ಶನಿವಾರ ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ತಾರಾ ಉಂಗುರ ಬಿಡುಗಡೆ ಮಾಡಿದರು. ಈ ಉಂಗುರದ ಬೆಲೆ 2 ಸಾವಿರ.
ಉಂಗುರ ಖರೀದಿಸಲು ಇಚ್ಛಿಸುವವರು ಕರೆ ಮಾಡಿ ಮೊದಲೇ ನೋಂದಣಿ ಮಾಡಿಕೊಳ್ಳಬೇಕು. ವಾರದ ನಂತರ ಉಂಗುರ ಸಿಗಲಿದೆ.
ಉಂಗುರದ ವಿಶೇಷತೆ: ಉಂಗುರದಲ್ಲಿ ಕಿರಿದಾದ ಟ್ಯಾಂಕ್, ಚಿಕ್ಕ ಸೂಜಿ, ಪಂಪ್ ಹಾಗೂ ಬಲಭಾಗದಲ್ಲಿ ಆರ್‌ಎಫ್‌ಐಡಿ ಟ್ಯಾಗ್, ಎರಡು ಕೀಲಿ ಇರುತ್ತದೆ. ಟ್ಯಾಂಕ್‌ನಲ್ಲಿ ಕ್ಯಾಪ್ಸಸಿಸ(ಮೆಣಸಿನಕಾಯಿಂದ ತೆಗೆದದ್ದು) ಎಂಬ ರಾಸಾಯನಿಕ ಇರುತ್ತದೆ. ಸೂಜಿಗೆ ಈ ಟ್ಯಾಂಕ್, ಪಂಪ್‌ನ ಸಂಪರ್ಕ ಇರುತ್ತದೆ.
ಎದುರಾಳಿ ಮೇಲೆ ದಾಳಿ ನಡೆಸುವ ವೇಳೆ, ಒಂದು ಕೀಲಿ ತೆಗೆದು ಆರೋಪಿಗೆ ಚುಚ್ಚಿದರೆ ಸಾಕು ಹೆಜ್ಜೇನು ಕಚ್ಚಿದಂತಾಗಿ ಆತ ಸುಮಾರು 45 ನಿಮಿಷಗಳ ಕಾಲ ಉರಿ ಹಾಗೂ ಕೆರೆತಕ್ಕೊಳಗಾಗುತ್ತಾನೆ. ಆಗ ಆಕೆ ಸುಲಭವಾಗಿ ಪರಾಗಬಹುದು. ಉಂಗುರ ಒಡೆಯಲು ಸಾಧ್ಯವಿಲ್ಲ. ಬೆಳ್ಳಿ, ಚಿನ್ನ, ಪ್ಲಾಟಿನಮ್‌ನಲ್ಲಿ ಲಭ್ಯ. ಒಂದು ಬಾರಿ ಐವರನ್ನು ಎದುರಿಸಲು ಸಹಕಾರಿಯಾಗುತ್ತದೆ. ಅದರಲ್ಲಿರುವ ರಾಸಾಯನಿಕ ಮುಗಿದ ಮೇಲೆ ಮತ್ತೆ ತುಂಬಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಢಿಢಿಢಿ.ಢ್ಟಿಟಛಟಿಡಡ್ಝಿಟ್ಜಿ.್ಝಟಿ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement